ಮಂಡ್ಯ: ಕರ್ನಾಟಕದಲ್ಲಿ ಸಕ್ಕರೆಗೆ ಹೆಚ್ಚು ಹೆಸರಾಗಿದ್ದು ಮಂಡ್ಯ ಜಿಲ್ಲೆ. ಸಾಮಾನ್ಯವಾಗಿ ಅಲ್ಲಿನ ಎತ್ತಿನಗಾಡಿಗಳಲ್ಲಿ 5 ರಿಂದ 8 ಟನ್ ಕಬ್ಬನ್ನು ಮಾತ್ರ ಸಾಗಿಸುತ್ತಾರೆ. ಆದ್ರೆ ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯ ಬಳಗದ ಯುವಕರು ಎತ್ತಿನಗಾಡಿಗೆ 14.55 ಟನ್ ಕಬ್ಬು ತುಂಬಿದ್ದಾರೆ. ಮಾತ್ರವಲ್ಲ; ಈ ಕಬ್ಬಿನ ಗಾಡಿಯನ್ನು ಜೋಡೆತ್ತುಗಳು ಅನಾಯಾಸವಾಗಿ ಎಳೆದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದು ಗಾಡಿಗೆ 12 ಟನ್ ತುಂಬುಲಾಗಿತ್ತು. ಆದರೆ ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಅವರ ಜೋಡೆತ್ತುಗಳು ಮೂರು ಕಿಲೋಮೀಟರ್ ಎಳೆದು ಸೈ ಎನಿಸಿಕೊಂಡಿವೆ. ಕಳೆದ ತಿಂಗಳಷ್ಟೇ ಈ ಜೋಡೆತ್ತುಗಳನ್ನು ಶರತ್ ಅವರು 2.90 ಲಕ್ಷಕ್ಕೆ ಖರೀದಿ ಮಾಡಿದ್ದರು.
PublicNext
22/11/2020 04:06 pm