ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ರೈತ ರಾಕೇಶನ ಬಾಳಿಗೆ ಬಲ ತುಂಬಿದ ಕೃಷಿಹೊಂಡ; 3.50 ಲಕ್ಷ ಆದಾಯ

ನರಗುಂದ: ಇಲ್ಲಿ ದುಡಿಮೆ ಇದೆ, ಬೆವರನ್ನು ಬಂಗಾರವಾಗಿಸಬಲ್ಲ ಬದಲಾವಣೆ ಇದೆ. ಮಣ್ಣಿನೊಡನೆ ಬೆರೆತು ಮಣ್ಣಲ್ಲೇ ಅನ್ನ ಬೆಳೆಯುವ ಸಾಧನೆ ಇದೆ. ಈ ಸಾಧನೆಗೆ ಬಲ ತುಂಬಲು ದೇಶಪಾಂಡೆ ಫೌಂಡೇಶನ್ ಕೊಡುಗೆಯೊಂದು ಬೆನ್ನೆಲುಬಾಗಿದೆ‌.

ಕೃಷಿ ಕ್ಷೇತ್ರ ಒಣ ಬೇಸಾಯಕ್ಕಿಂತ ಬಲಿಷ್ಠವಾಗಿ ಬೆಳೆಗಳಿಗೆ ಪೂರಕವಾಗಿ ಗುಣಮಟ್ಟದ ಇಳುವರಿ ಪಡೆಯಲು ಕೃಷಿಹೊಂಡ ಆಧಾರವಾಗಿ ಇಲ್ಲೊಬ್ಬ ರೈತನ ಬಾಳಲ್ಲಿ ವಿಶ್ವಾಸದ ಅಲೆ ಎಬ್ಬಿಸಿದೆ.

ನರಗುಂದ ತಾಲೂಕಿನ ಹದಲಿ ಗ್ರಾಮದ ರಾಕೇಶ್ ಶಿವಲಿಂಗಪ್ಪ ಹಡಗಲಿ ಎಂಬುವವರು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ 6 ಎಕರೆ ಭೂಮಿಗೆ ಹೊಂದಿಕೊಂಡು 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ನೀರಾವರಿ ಬೇಸಾಯದಲ್ಲಿ ಹತ್ತಿ, ಗೋವಿನಜೋಳ, ಈರುಳ್ಳಿ, ಮೆಣಸಿನಕಾಯಿ ಬೆಳೆ ಬೆಳೆದು ನಿರೀಕ್ಷೆ ಇಟ್ಟ ವಾರ್ಷಿಕ 3.50 ಲಕ್ಷ ಆದಾಯ ನಿಜ ಮಾಡಿಕೊಂಡಿದ್ದಾರೆ.

ಇದೇ ಒಣ ಬೇಸಾಯದಲ್ಲಿ ಕೇವಲ ಹೆಸರು ಬೆಳೆಗೆ ಸೀಮಿತವಾಗಿದ್ದ ರೈತ ರಾಕೇಶ್ ಹಡಗಲಿ ಕೃಷಿಹೊಂಡ ನಿರ್ಮಿಸಿದ್ದು ಹೇಗೆ ? ಅದರ ಪ್ರಯೋಜನ ಏನು ? ಬೆಳೆ ಇಳುವರಿ, ಆದಾಯ ಹೆಚ್ಚಳಕ್ಕೆ ಕೃಷಿಹೊಂಡ ಹೇಗೆ ಸಹಾಯಕವಾಯ್ತು ? ಎಂಬುದರ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.

Edited By : Manjunath H D
PublicNext

PublicNext

18/08/2022 08:07 pm

Cinque Terre

160.04 K

Cinque Terre

1

ಸಂಬಂಧಿತ ಸುದ್ದಿ