ಚೆನ್ನೈ: ತಮಿಳುನಾಡಿನ ಕೂನೂರ್ ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ ಮಡಿದ 13 ಜನರಲ್ಲಿ ಸಾಯಿ ತೇಜ್ ಕೂಡಾ ಒಬ್ಬರು.ಕೇವಲ 27 ವರ್ಷದ ಸಾಯಿ ತೇಜ್ ಅವರು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದರು. ಮೂಲತಃ ಆಂಧ್ರಪ್ರದೇಶದವರಾಗಿರುವ ಸಾಯಿ 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ ಗೆ ಸೇರಿದ್ದರು.
ಕೆಲ ದಿನಗಳ ಹಿಂದೆ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಾಯಿ ತೇಜ್ ಮನೆಗೆ ಭೇಟಿ ನೀಡಿದ್ದರು. ಇವರಿಗೆ ಪತ್ನಿ ಹಾಗೂ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗು ಇದೆ.
ಇನ್ನು ಹೆಲಿಕಾಪ್ಟರ್ ದುರಂತಕ್ಕೂ 4 ಗಂಟೆಗಳ ಹಿಂದೆಯಷ್ಟೇ ಸಾಯಿ ತೇಜ್ ಅವರು ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಬಳಿಕ ಬಂದ ಕರೆವೊಂದರಲ್ಲಿ ಸಾಯಿ ತೇಜ್ ಇನ್ನಿಲ್ಲ ಎನ್ನುವ ಸುದ್ದಿ ಕುರಬಾಳ ಮಂಡಲದ ಯಗುವರೆಗಡ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಕುಟುಂಬ ಕಣ್ಣೀರಾಗಿದೆ. ಪಾರ್ಥಿವ ಶರೀರ ನಾಳೆ ಆಂಧ್ರಪ್ರದೇಶಕ್ಕೆ ಬರಲಿದ್ದು, ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
PublicNext
09/12/2021 11:45 am