ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಸೇಫ್.! ಈಜು ಬಿದ್ದು ಜೀವ ಕಾಪಾಡಿದ ಯುವಕರು.!

ವರದಿ: ಮೌನೇಶ ಬಿ. ಮಂಗಿ ಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

ಯಾದಗಿರಿ: ವರುಣನ ಆರ್ಭಟಕ್ಕೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮ ಜಾಲಾವೃತಗೊಂಡು ಜನರು ಹೈರಾಣಾಗಿದ್ದಾರೆ.

ಗ್ರಾಮದ 6 ವರ್ಷದ ಬಾಲಕ ಬಸವರಾಜ ಎಂಬಾತ ಸೇತುವೆ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿ ಗಡ್ಡೆಯಲ್ಲಿ ಸಿಕ್ಕಿಬಿದ್ದಿದ್ದ.

ಸುದ್ದಿ ತಿಳಿದ ಅದೇ ಗ್ರಾಮದ ಯಮನೂರಿ, ಕೆಂಚಪ್ಪ ಹಾಗೂ ಹಣಮಂತ ಅವರು, ನದಿಯಲ್ಲಿ ಈಜು ಬಿದ್ದು ಹಗ್ಗದ ಸಹಾಯದಿಂದ ಬಾಲಕನನ್ನ ಜೀವ ಕಾಪಾಡಿದ್ದಾರೆ.

ಜೀವದ ಹಂಗು ತೊರೆದು ಬಾಲಕನ ಜೀವ ಕಾಪಾಡಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

21/09/2021 03:18 pm

Cinque Terre

93.37 K

Cinque Terre

2

ಸಂಬಂಧಿತ ಸುದ್ದಿ