ನವದೆಹಲಿ: ಕೆಲವೊಂದು ಸಂದರ್ಭಗಳಲ್ಲಿ ಚಾಲಕರ ಸಮಯ ಪ್ರಜ್ಞೆ ಭಾರಿ ಅನಾಹುತಗಳನ್ನು ತಪ್ಪಿಸುತ್ತವೆ. ಸದ್ಯ ಉತ್ತರ ಪ್ರದೇಶದ ಟೋಲ್ ಪ್ಲಾಜಾವೊಂದರ ಬಳಿ ಮುಂದಿನ ವಾಹನಗಳಿಗೆ ಇನ್ನೇನು ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಟ್ರಕ್ ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ.
ದಾದ್ರಿ-ಲುಹರ್ಲಿ ಮಾರ್ಗದಲ್ಲಿ ಬರುತ್ತಿದ್ದ ಟ್ರಕ್ ಬ್ರೇಕ್ ವಿಫಲವಾಗಿದೆ. ಇದರಿಂದ ರಸ್ತೆ ಮಧ್ಯದಿಂದ ಅಡ್ಡಾದಿಡ್ಡಿಯಾಗಿ ಬರುವ ಟ್ರಕ್ ಮುಂದೆ ಎರಡೂ ವಾಹನಗಳಿದ್ದರೂ ಅವುಗಳಿಗೆ ಡಿಕ್ಕಿ ಹೊಡೆಯದೇ ಟೋಲ್ ಬೂತ್ ನ ಕೊನೆಯ ಪಥದಲ್ಲಿ ಸಾಗುವ ಮೂಲಕ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ.
PublicNext
29/08/2021 08:09 pm