ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಂಕಿತರ ಶವಸಂಸ್ಕಾರ ಮಾಡಿದಾತ ಸೋಂಕಿಗೆ ಬಲಿ-ಪತ್ನಿ ಅನಾಥ

ಶಿವಮೊಗ್ಗ-ಅವರು ಕೊರೊನಾ ಸೋಂಕಿತರಾಗಿ ಸಾವನ್ನಪ್ಪಿದವರ ಶವಗಳನ್ನು ಗೌರವದಿಂದ ಅಂತ್ಯ ಸಂಸ್ಕಾರ ನಡೆಸಿದ್ದರು. ಈ ರೀತಿ ಶವ ಸಂಸ್ಕಾರ ಮಾಡಿದ ಅದೇ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅನಾಥರಾದ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.

ಶಿವಮೊಗ್ಗ ಸಮೀಪದ ಹೊಸಮನೆ ತಾಂಡ ನಿವಾಸಿಯಾಗಿದ್ದ ಪಾಪನಾಯ್ಕ್ ಅವರೇ ಕೊರೊನಾ ಸೋಂಕಿಗೆ ಬಲಿಯಾದವರು. ಪಾಪನಾಯ್ಕ ಅವರು ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದರು‌. ಪಾಲಿಕೆಗೆ ಸೇರಿದ ಚಿತಾಗಾರದಲ್ಲಿ ಇವರನ್ನ ಅಂತ್ಯಕ್ರಿಯೆ ನೆರವೇರಿಸಿ ಕೊಡುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅಲ್ಲಿ ಬಂದ ಕೊರೊನಾ ಸೋಂಕಿತ ಶವಗಳನ್ನು ಪಾಪನಾಯ್ಕ್ ಅವರೇ ಅಂತ್ಯಕ್ರಿಯೆ ನಡೆಸಿಕೊಡ್ತಿದ್ದರು‌. ಈ ನಡುವೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಇದರ ಬೆನ್ನಲ್ಲೇ ಅವರ ಇಬ್ಬರು ಮಕ್ಕಳಲ್ಲಿ ಒಂದು ಮಗು ಅದೇ ಕೊರೊನಾ ಸೋಂಕಿಗೆ ಬಲಿಯಾದರೆ ಇನ್ನೊಂದು ಮಗು ಕೂಡ ಅಸಹಜ ಸಾವು ಕಂಡಿದೆ. ಹೀಗಾಗಿ ಆ ಕಡೆ ಪತಿ ಈ ಕಡೆ ಮಕ್ಕಳನ್ನೂ ಕಳೆದುಕೊಂಡ ಪಾಪನಾಯ್ಕ್ ಅವರ ಪತ್ನಿ ಈಗ ಅನಾಥವಾಗಿದ್ದಾರೆ.

Edited By : Nagaraj Tulugeri
PublicNext

PublicNext

30/10/2020 06:47 pm

Cinque Terre

153.83 K

Cinque Terre

11

ಸಂಬಂಧಿತ ಸುದ್ದಿ