ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

65ರ ಹರೆಯದಲ್ಲಿ ಎರಡನೇ ಮದುವೆಗೆ ಮುಂದಾದ ಹಿರಿಯ ವಕೀಲ ಹರೀಶ್ ಸಾಳ್ವೆ!

ಹೊಸದಿಲ್ಲಿ: ಮದುವೆಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಸಾಬೀತು ಮಾಡಲು ಹಿರಿಯ ವಕೀಲ ಹರೀಶ್ ಸಾಳ್ವೆ ಮುಂದಾಗಿದ್ದಾರೆ.

ಹೌದು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಹರೀಶ್ ಸಾಳ್ವೆ ತಮ್ಮ 65ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಕುರಿತು ಘೋಷಣೆಯನ್ನೂ ಮಾಡಿದ್ದಾರೆ.

ಮಾಜಿ ಸಾಲಿಸಿಟರ್ ಜನರಲ್, ಕುಲಭೂಷಣ್ ಜಾಧವ್ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಐಸಿಜೆಯಲ್ಲಿ ವಾದಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಸದ್ಯ ಎರಡನೇ ಮದುವೆಯ ಸಿದ್ಧತೆಯಲ್ಲಿದ್ದಾರೆ.

ಲಂಡನ್ ಮೂಲದ ಕಲಾವಿದೆ ಕ್ಯಾರೊಲೀನ್ ಬ್ರೊಸ್ಸಾರ್ಡ್ ಅವರನ್ನು ಮುಂದಿನ ವಾರ ಚರ್ಚ್ವೊಂದರಲ್ಲಿಅವರು ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.

ಸಾಳ್ವೆ ಅವರು ಕಳೆದ ಜೂನ್ ತಿಂಗಳಲ್ಲೇ ಮೊದಲ ಪತ್ನಿ ಮೀನಾಕ್ಷಿ ಸಾಳ್ವೆ ಅವರಿಗೆ ವಿಚ್ಛೇದನ ನೀಡಿದ್ದರು.

ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 37 ವರ್ಷದ ಸಾಕ್ಷಿ, ಎರಡನೇ ಮಗಳು 33 ವರ್ಷದ ಸಾನಿಯಾ.

ಸದ್ಯ ಸಾಳ್ವೆ ಅವರ ಕೈಹಿಡಿಯುತ್ತಿರುವ ಕಲಾವಿದೆ ಕ್ಯಾರೊಲೀನ್ ಗೆ 18 ವರ್ಷದ ಪುತ್ರಿಯಿದ್ದಾಳೆ.

ಕೊರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

27/10/2020 08:14 am

Cinque Terre

53.73 K

Cinque Terre

3