ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ವಿಜಯಲಕ್ಷ್ಮಿ ಇನ್ನೂ ನೆನಪು ಮಾತ್ರ

ಬೆಂಗಳೂರು: ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಮಹಿಳಾ ಅಧಿಕಾರಿ, ನಿವೃತ್ತ ವಿಂಗ್ ಕಮಾಂಡರ್ ವಿಜಯಲಕ್ಷ್ಮಿ ರಮಣನ್ (96) ಅವರು ಭಾನುವಾರ ನಿಧನರಾದರು.

1924ರಲ್ಲಿ ಜನಿಸಿದ್ದ ಅವರು, ತಂದೆಯ ಮರಣದ ನಂತರ 1955ರಲ್ಲಿ ವಾಯುಪಡೆಗೆ ಸೇರಿದ್ದರು.

ಸ್ತ್ರೀರೋಗ ತಜ್ಞೆಯಾಗಿ ಸೇನೆಯ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದರು.

1972ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಏರಿದ್ದ ಅವರು, 1979ರಲ್ಲಿ ನಿವೃತ್ತರಾಗಿದ್ದರು.

ಯುದ್ಧದ ಸಂದರ್ಭದಲ್ಲಿ ಆಡಳಿತಾತ್ಮಕ ಹುದ್ದೆಗಳನ್ನೂ ನಿಭಾಯಿಸಿದ್ದರು.

ಅವರಿಗೆ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿತ್ತು.

ವಿಜಯಲಕ್ಷ್ಮಿಯವರ ಪತಿ ಕೆ.ವಿ. ರಮಣನ್ ಅವರೂ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು.

ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

Edited By : Nirmala Aralikatti
PublicNext

PublicNext

22/10/2020 07:23 am

Cinque Terre

65.55 K

Cinque Terre

5

ಸಂಬಂಧಿತ ಸುದ್ದಿ