ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ; ಕೋನರಡ್ಡಿ ಸಂತಾಪ

ನವಲಗುಂದ: ನವಲಗುಂದ ತಾಲ್ಲೂಕಿನ ಹಾಲಕುಸುಗಲ್ ಗ್ರಾಮದಲ್ಲಿ ಬುಧವಾರ ಸಂಜೆ ಮಳೆಯಿಂದ ಆಶ್ರಯ ಪಡೆಯಲು ಮುಂದಾಗಿದ್ದ ಗ್ರಾ.ಪಂ ಸದಸ್ಯ ವಿರೂಪಾಕ್ಷಪ್ಪ ಧಾರವಾಡ ಸಿಡಿದು ಬಡಿದು ಮೃತಪಟ್ಟಿದ್ದರು. ತಕ್ಷಣವೇ ಜಮೀನಿನಲ್ಲಿದ್ದ ಮೃತ ದೇಹವನ್ನು ನೋಡಿ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಸಂತಾಪ ವ್ಯಕ್ತಪಡಿಸಿದರು.

ಮೃತರ ಧರ್ಮಪತ್ನಿ ನಿರ್ಮಲಾ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಟ್ರ್ಯಾಕ್ಟರ್‌ನಲ್ಲಿ ಗ್ರಾಮಸ್ಥರೆಲ್ಲರೂ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸರ್ಕಾರ ತಕ್ಷಣ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋನರಡ್ಡಿ ಅವರು ಒತ್ತಾಯಿಸಿದರು.

Edited By : PublicNext Desk
Kshetra Samachara

Kshetra Samachara

01/09/2022 09:15 am

Cinque Terre

8.62 K

Cinque Terre

1

ಸಂಬಂಧಿತ ಸುದ್ದಿ