ನವಲಗುಂದ : ಜನವರಿ 22 ರಂದು ಅಂದರೆ ನಾಳೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೇಕೆದಾಟು ಮತ್ತು ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾರ್ಯ ರೂಪಕ್ಕೆ ತರುವ ಸಲುವಾಗಿ ನಡೆಯಲಿರುವ ಸಭೆಯಲ್ಲಿ ಮಹದಾಯಿ-ಕಳಸಾ ಬಂಡೂರಿ, ಬೆಳೆ ವಿಮೆ, ಬೆಳೆ ಪರಿಹಾರಗಳ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಎಂದು ನವಲಗುಂದದಲ್ಲಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಹೌದು ನವಲಗುಂದ ಮಲಪ್ರಭ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ಪಟ್ಟಣದ ರೈತ ಭವನದಲ್ಲಿ ಇಂದು ಮನವಿ ಸಲ್ಲಿಸಲಾಗಿದ್ದು, ಮಹದಾಯಿ-ಕಳಸಾ ಬಂಡೂರಿ ಕಾಮಗಾರಿಗೆ ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ, ತಕ್ಷಣವೇ ಕಾರ್ಯರೂಪಕ್ಕೆ ತರುವುದಾಗಿ ಕಳೆದ ಬಾರಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.
ಆದರೆ ನಾಲ್ಕು ತಿಂಗಳು ಕಳೆದು ಮತ್ತೊಮ್ಮೆ ಸಭೆ ಕರೆಯಲಾದರೂ ಇದುವರೆಗೂ ಕಾರ್ಯ ಆಗಿಲ್ಲ. ಈ ಬಾರಿ ಕಾರ್ಯ ರೂಪಕ್ಕೆ ತರಬೇಕು. ಇನ್ನು ಒಂದೂವರೆ ತಿಂಗಳಲ್ಲಿ ಕಾರ್ಯ ರೂಪಕ್ಕೆ ತರದೇ ಹೋದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Kshetra Samachara
21/01/2022 06:18 pm