ನವಲಗುಂದ : ಗುರುವಾರ ಸಂಜೆ ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿ ಗಾಳಿ ಸಹಿತ ಭಾರಿ ಮಳೆಗೆ ಪುರಸಭೆ ಜಾಗದಲ್ಲಿ ಹಾಕಿದ್ದ ತಗಡಿನ ಶೆಡ್ದುಗಳು ಕಿತ್ತು ಹೋಗಿ ಅವಾಂತರಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಶುಕ್ರವಾರ ನವಲಗುಂದ ಗ್ರೇಡ್-2 ಎಮ್.ಜೆ ಹೋಕ್ರಾಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ತಗಡಿನ ಶೆಡ್ಡಿನ ಮೇಲೆ ಇಟ್ಟಂತ ಕಲ್ಲುಗಳು ಅಕ್ಕ ಪಕ್ಕದಲ್ಲಿರುವ ಮನೆಗಳ ಹಾಗೂ ಬೈಕಿನ ಮೇಲೆ ಬಿದ್ದಿವೆ ಎನ್ನಲಾಗಿತ್ತು. ಇದೆ ವೇಳೆ ಓರ್ವ ಮಹಿಳೆಯ ತಲೆಗೆ ಕಲ್ಲು ತಾಕಿ ಕೊಂಚ ಗಾಯವಾಗಿತ್ತು. ಈ ಹಿನ್ನೆಲೆ ಇಂದು ನವಲಗುಂದ ಗ್ರೇಡ್-2 ಎಮ್.ಜೆ. ಹೋಕ್ರಾಣಿ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿದರು.
Kshetra Samachara
29/04/2022 06:34 pm