ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಧಾರವಾಡ : ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2 ನೇ ತ್ರೈಮಾಸಿಕ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ 110 ಕೆ.ವ್ಹಿ. ತಡಸಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವ್ಹಿ ಮಾರ್ಗಗಳಲ್ಲಿ ತಡಸಿನಕೊಪ್ಪ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ವನಸಿರಿನಗರ, ರಾಜಾಜಿನಗರ, ಸತ್ತೂರು, ಸತ್ತೂರು ಆಶ್ರಯ ಕಾಲೋನಿ, ರಾಯಾಪುರ, ಕೈಗಾರಿಕಾ ಪ್ರದೇಶ, ಎಸ್‍ಡಿಎಂ ಮೆಡಿಕಲ್ ಕಾಲೇಜ್, ಸಂಜೀವಿನಿ ಪಾರ್ಕ್, ಎನ್. ಜಿ. ಇ. ಎಫ್. ಸತ್ತೂರ ಕೈಗಾರಿಕಾ ಪ್ರದೇಶ, ತಡಸಿನಕೊಪ್ಪ, ಕರಿಯಮ್ಮಾ ದೇವಸ್ಥಾನ, ಕೆಎಚ್‍ಬಿ, ಉದಯಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 27 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು / ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಧಾರವಾಡ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

26/11/2020 09:16 am

Cinque Terre

37.68 K

Cinque Terre

2