ನವಲಗುಂದ : ಮಲಪ್ರಭೆಗೆ ಮಹದಾಯಿ ಕಳಸಾ ಬಂಡೂರಿ ನೀರು ಜೋಡಣೆ ಮಾಡಬೇಕೆಂದು ಮಹದಾಯಿ ಒಕ್ಕೂಟದ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯಣ್ಣವರ ತಹಶೀಲ್ದಾರ್ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಭಜಂತ್ರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಮಲ್ಲೇಶ ಉಪ್ಪಾರ ಮಾತನಾಡಿ, ಈ ಹಿಂದೆ ಆಗಬೇಕಿದ್ದ ಯೋಜನೆಯನ್ನು ಸರಕಾರ ಕಾರ್ಯಾರಂಭ ಮಾಡಲು ತೆಗೆದುಕೊಂಡ ನಿರ್ಣಯವನ್ನು ರೈತ ಹೋರಾಟ ಒಕ್ಕೂಟ ಸೇರಿದಂತೆ ಕರ್ನಾಟಕದ 1300 ಸಂಘಟನೆಗಳ ಪರವಾಗಿ ಸ್ವಾಗತಿಸುತ್ತೇವೆ. ಸತತವಾಗಿ 2610 ದಿನದ ಧರಣಿ ಸತ್ಯಾಗ್ರಹ ಮುಂದುವರೆದಿದ್ದು, ಹೇಳಿಕೆಯಂತೆ ನಡೆದುಕೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುಭಾಸಚಂದ್ರಗೌಡ ಪಾಟೀಲ್, ಬಸನಗೌಡ ಪಕೀರಗೌಡ, ಶಿವಪ್ಪ ಸಂಗಳ, ಮಲ್ಲಪ್ಪ ಬಸವಣ್ಣವರ, ಶಿವು ಪೂಜಾರ್, ಸಂಗಪ್ಪ ನೀಡವಣಿ, ಬಸಪ್ಪ ಬಳ್ಳೊಳ್ಳಿ, ಸಿದ್ದಲಿಂಗಪ್ಪ ಹಳ್ಳದ, ಕರಿಯಪ್ಪ ತಳವಾರ, ಯಕ್ಕೆರಪ್ಪ ನಾಗಣ್ಣವರ, ಸಿದ್ದಪ್ಪ ಅಕ್ಕಿ ಇತರರು ಇದ್ದರು.
Kshetra Samachara
02/10/2022 12:02 pm