ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಡೆಸಿದ 'ಶಿವಮೊಗ್ಗ ಮಹಾನಗರ ಪಾಲಿಕೆ ಮಕ್ಕಳ ದಸರಾ' 4ನೇ ಓಪನ್ ಸ್ಟೇಟ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್-2022 ಅನ್ನು ಶಿವಮೊಗ್ಗದಲ್ಲಿ ಸೆಪ್ಟೆಂಬರ್ 27ರಂದು ಆಯೋಜಿಸಿತ್ತು. ಈ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಮಕ್ಕಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ.
ಸಮರ್ಥ ಆರ್. ಮರಾಠೆ ಹಾಗೂ ಸ್ವರ ಎಸ್. ಪಾಟೀಲ್ ತಲಾ 2 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇತ್ತ ಸಾನ್ವಿ ಸಾಂಬ್ರಾಣಿ ಹಾಗೂ ಕೃತಾರ್ಥ್ ಐತಾಳ್ ತಲಾ 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇನ್ನು ಅನಿಶ್ ಹುಬ್ಬಳ್ಳಿ 2 ಕಂಚಿನ ಪದಕ ಹಾಗೂ ರಾಹಿಲ್ ಹುಲಮನಿ 1 ಕಂಚಿನ ಪದಕ ಗೆದಿದ್ದಾರೆ.
ಈ ಮಕ್ಕಳಿಗೆ ಅಕ್ಷಯ ಸೂರ್ಯ ವಂಶಿ ಅವರು ತರಬೇತಿ ನೀಡಿದ್ದು, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಸದಸ್ಯರು ಮತ್ತು ಪಾಲಕರು, ಧಾರವಾಡ ಜಿಲ್ಲಾ ರೋಲರ್ ಸ್ಟೇಟಿಂಗ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಕಾರ್ಯದರ್ಶಕರು ಪ್ರೋತ್ಸಾಹ ನೀಡಿದ್ದಾರೆ.
Kshetra Samachara
01/10/2022 03:51 pm