ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿರಗುಪ್ಪಿಯಲ್ಲಿ ಶಾಲಾ ಮಕ್ಕಳ ಖೋ -ಖೋ ರೋಚಕ ಪಂದ್ಯಾವಳಿ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ ಮತ್ತು ಬಾಲಕಿಯರ ಖೋ- ಖೋ ಪಂದ್ಯಾವಳಿ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದವು.

ಈ ಪಂದ್ಯಾವಳಿಯಲ್ಲಿ ಪ್ರಾಥಮಿಕ ಶಾಲೆಯಿಂದ 14 ಟೀಮ್ ಪ್ರೌಢ ಶಾಲೆಯಿಂದ 14 ಟೀಮ್ ಭಾಗಿಯಾಗಿದ್ದವು. ಖೋ ಖೋ ಪಂದ್ಯಾವಳಿಯಲ್ಲಿ ಮಕ್ಕಳು ಭಾಗವಹಿಸಿ ಅತ್ಯದ್ಭುತವಾಗಿ ಆಟವಾಡಿದರು.

ಈ ಪಂದ್ಯಾವಳಿಯನ್ನ ಕ್ಷೇತ್ರದ ಶಿಕ್ಷಣಾಧಿಕಾರಿ ಅಶೋಕ್ ಸಿಂಧಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ N N ಕಂಪ್ಲಿ, ಗ್ರಾಮದ ಹಿರಿಯರು ಮಹಾಬಳೇಶ್ವರ ಅಣ್ಣಿಗೇರಿ, ಶಿವಣ್ಣ ಹುಬ್ಬಳ್ಳಿ, ಶಾಲೆಯ ಆಡಳಿತ ಮಂಡಳಿ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

22/09/2022 03:32 pm

Cinque Terre

75.34 K

Cinque Terre

0

ಸಂಬಂಧಿತ ಸುದ್ದಿ