ಹುಬ್ಬಳ್ಳಿ: ನಗರದ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಸೆ. 8 ರಿಂದ 11 ರವರಗೆ ನಡೆಯಲಿರುವ ಅಂತರ ರಾಷ್ಟ್ರೀಯ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವೆ ನಡೆಯಲಿರುವ ಟೆಸ್ಟ್ (4 ದಿನ ) ಪಂದ್ಯ ವೀಕ್ಷಿಸಲು 2ಸಾವಿರ ಜನರಿಗೆ ಉಚಿತ ಪ್ರವೇಶವಿದೆ ಎಂದು ಕೆಎಸ್ ಸಿಎ ಧಾರವಾಡ ಕೆಎಸ್ ಸಿ ಎ ಕನ್ವೇನರ್ ಅವಿನಾಶ್ ಪೋತದಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರ ವೀಕ್ಷಣೆಗೆ ಅವಕಾಶಕ್ಕೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಬಂದು ನೋಡಬಹುದು ಎಂದರು.
ಕಳೆದ ಮೂರು ವರ್ಷದಿಂದ ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಈಗ ಬಿಸಿಸಿಐ ಅಂತರ ರಾಷ್ಟ್ರೀಯ ಪಂದ್ಯಕ್ಕೆ ಅವಕಾಶ ನೀಡಿದ್ದು, ಕೆಎಸ್ ಸಿಎ ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಸಂತಸ ಮೂಡಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಅತೀ ಹೆಚ್ಚು ಪಂದ್ಯಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದ್ದು, ಪ್ರಸಕ್ತ ವರ್ಷ ಮೂರುನಾಲ್ಕು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಪಂದ್ಯಗಳಿಗೂ ಅವಕಾಶ ನೀಡಬಹುದು ಎಂದರು.
ಈ ವೇಳೆ ವೀರಣ್ಣ ಸವಡಿ, ಅಲ್ತಾಪ್ ಕಿತ್ತೂರ, ಜೋನಲ್ ಕಮಿಟಿ ಸದಸ್ಯ ಶಿವಾನಂದ ಗುಂಜಾಳ ಇದ್ದರು.
Kshetra Samachara
06/09/2022 06:17 pm