ಅಳ್ನಾವರ:ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ಅವಿಭಾಜ್ಯ ಅಂಗವಾಗ ಬೇಕು.ಇತ್ತೀಚೆಗೆ ಯುವಕರು ದೇಹವನ್ನ ದಂಡಿಸುವ ಬದಲು ಫೋನ್ ಗೆ ಮಾರುಹೋಗಿದ್ದಾರೆ.ಮಕ್ಕಳು ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ಸಾಹ ಮತ್ತು ಲವ ಲವಿಕೆಯಿಂದ ಇರುತ್ತಾರೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ಅಳ್ನಾವರದಲ್ಲಿ ಏರ್ಪಡಿಸಲಾಗಿದ್ದ ಅಳ್ನಾವರ 'ತಾಲೂಕು ಮಟ್ಟದ ದಸರಾ ಕ್ರೀಡಾಕೂಟ'ವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ನೂತನವಾಗಿ ಅಳ್ನಾವರ ತಾಲೂಕು ರಚನೆಗೊಂಡ ನಂತರ ಮೊಟ್ಟ ಮೊದಲ ಬಾರಿಗೆ ದಸರಾ ಕ್ರೀಡಾಕೂಟ ಏರ್ಪಾಡಾಗಿದ್ದು ಸಹಜವಾಗಿಯೇ ಕ್ರೀಡಾ ಪ್ರೇಮಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದರು.
ಆಟದಲ್ಲಿ ನಿರ್ಣಾಯಕರ ಪಾತ್ರ ಬಹಳ ಮುಖ್ಯವಾಗಿದೆ.ತಾರತಮ್ಯ ಮಾಡದೆ ನಿರ್ಣಯ ನೀಡುವುದು ನಿಮ್ಮ ಧರ್ಮ.ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗದಂತೆ ಆಟಗಳನ್ನು ಆಡಿಸಿರಿ ಎಂದು ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು,ತಾಲೂಕು ಮಟ್ಟದ ಕ್ರೀಡಾಪಟುಗಳು,ಪಟ್ಟಣ ಪಂಚಾಯಿತಿ ಯ ಅಧ್ಯಕ್ಷೆ ಸುವರ್ಣಾ ಕಡಕೊಳ,ಉಪಾಧ್ಯಕ್ಷ ನದೀಮ್ ಕಾಂಟ್ರಾಕ್ಟರ್, ಲಿಂಗರಾಜ ಮೂಲಿಮಣಿ,ಪ್ರವೀಣ ಪವಾರ,ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ ಕಂಬಾರ,ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
23/08/2022 06:40 pm