ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ಸಾಹಿ ಈಜು ಪಟುಗಳಿಗಾಗಿ ಈಜು ಸ್ಪರ್ಧೆ

ಹುಬ್ಬಳ್ಳಿ: ಎಂ.ಆರ್ ಅಕಾಡೆಮಿ ಹಾಗೂ ನವೀನ ಪಾರ್ಕ ರೆಸಿಡೆನ್ಸ ಎಸೋಸಿಯೇಷನ್ ನೇತ್ರತ್ವದಲ್ಲಿ ಇಂದು (ರವಿವಾರ) ಹುಬ್ಬಳ್ಳಿಯ ಕೇಶ್ವಾಪೂರದ ಈಜು ಕೊಳದಲ್ಲಿ ಈಜು ಸ್ಪರ್ಧೆ ಏರ್ಪಡಿಲಾಗಿತ್ತು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸಿದ ಈ ಈಜು ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅನೇಕ ಈಜು ಪಟುಗಳು ಭಾಗವಹಿಸಿದ್ದರು.

25 ಮೀಟರ್, 50 ಮೀಟರ್ ಹಾಗೂ 100 ಮೀಟರ್ ಸ್ಪರ್ಧೆಯನ್ನು ಆಯಾ ವಯೋಮಿತಿಯ ಮಕ್ಕಳಿಗೆ ಏರ್ಪಡಿಸಲಾಗಿತ್ತು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಸ್ಪರ್ಧೆ ಹಾಗೂ ಈಜು ಚಟುವಟಿಕೆಗಳಿಂದ ದೂರವಿದ್ದ ಮಕ್ಕಳಲ್ಲಿ ಈ ಸ್ಪರ್ಧೆಯ ಹೊಸ ಹುರುಪನ್ನು ಮೂಡಿಸಿತು. ಈ ಈಜು ಸ್ಪರ್ದೆಯಲ್ಲಿ ವಿಜೇತರಾದ ಈಜು ಪಟುಗಳಿಗೆ 15 ಅಗಸ್ಟ 2022ರಂದು ನವೀನ ರೆಸಿಡೆನ್ಸ ಅಸೋಸಿಯೇಶನ್ ಸಿ.ಎ ಜಾಗದಲ್ಲಿ ನಡೆಯುವ 75ನೇ ಸುವರ್ಣಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ವಿತರಿಸಲಾಗುವುದು. ಎಂ.ಆರ್ ಅಕಾಡೆಮಿಯ ಪಾಲುದಾರರಾದ ಶ್ರೀ ರಾಜೇಶ ವ್ಹಿ ಶೆಟ್ಟಿಯವರು. ಈ ಈಜು ಸ್ಪರ್ದೆಯ ಎಲ್ಲ ಚಟುಚಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈಜು ತರಬೇತುದಾರರಾದ ಶಿವರಾಜ್ ಡಾಣಿಗಲ್ ಹಾಗೂ ಸುಬ್ರಮಣ್ಯ ಈಜು ಸ್ಪರ್ಧೆಯನ್ನು ನಿರ್ವಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/08/2022 10:00 pm

Cinque Terre

34.23 K

Cinque Terre

0

ಸಂಬಂಧಿತ ಸುದ್ದಿ