ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆ.ಎಚ್ ಪಾಟೀಲ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ ಸ್ನಾತಕ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದ 2022-23ರ ಶೈಕ್ಷಣಿಕ ವರ್ಷದ ಕ್ರೀಡಾಕೂಟವನ್ನು ಸಂಘದ ಗೌರವ ಕಾರ್ಯದರ್ಶಿ ಶ್ರೀ ಆರ್ ಕೆ ಪಾಟೀಲರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಮುಖ್ಯ ದೈಹಿಕ ಅರೋಗ್ಯ ಕಾಪಾಡಿಕೊಳ್ಳಿ. ದಿನನಿತ್ಯ ವ್ಯಾಯಾಮ ಯೋಗ ಮಾಡಬೇಕು ಎಂದರು.

ನಂತರ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರು ಎಸ್ ಬಿ ಸಣಗೌಡರ, ಮೊಬೈಲ್‌ನಲ್ಲಿ ಆಟವಾಡುವ ಕಡೆಗೆ ಇಂದಿನ ಯುವ ಸಮುದಾಯ ವಾಲುತ್ತಿದೆ. ಕ್ರೀಡಾಂಗಣದಲ್ಲಿ ಆಟವಾಡುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬಹುದು ಎಂದರು.

ಪಿಯು ವಿಜ್ಞಾನ ವಿಭಾಗದ ಸಹ ಸಂಯೋಜಕ ಡಾ. ಶಿವರಾಂ ಪಾಟೀಲ, ವೇಧಾ ಹುಡೇದ, ಪ್ರಿಯಾಂಕಾ ಕಿರೆಸೂರ, ಪ್ರಿಯಾಂಕಾ ನವಲಗುಂದ, ರವಿ ದೊಡ್ಡಬಿದರಿ, ಪವನ್ ದಮಾಮ್ ಮತ್ತು ಬೋದಕೇತರ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು. ನಂತರ ಆರ್ ಕೆ ಪಾಟೀಲರು ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ಆಡುವುದರ ಮೂಲಕ ಆಟಗಳನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Edited By : Nagesh Gaonkar
Kshetra Samachara

Kshetra Samachara

28/07/2022 09:15 pm

Cinque Terre

66.8 K

Cinque Terre

2

ಸಂಬಂಧಿತ ಸುದ್ದಿ