ನವಲಗುಂದ: ನವಲಗುಂದ ನಗರದ ಶ್ರೀ ಶಂಕರ ಮಹಾವಿದ್ಯಾಲಯ ಮೈದಾನದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅಭಿಮಾನಿ ಬಳಗದ ವತಿಯಿಂದ ನವಲಗುಂದ ಪ್ರಿಮೀಯರ ಲೀಗ್ ಸೀಸನ್ -2 ರ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭಾಗಿಯಾಗಿ ಚಾಲನೆ ನೀಡಿದರು.
ಮೊದಲು ಪಟ್ಟಣದಲ್ಲಿ ಬೈಕ್ ರ‍್ಯಾಲಿ ಮೂಲಕ ಮೈದಾನಕ್ಕೆ ಆಗಮಿಸಿ, ನಂತರ ಬ್ಯಾಟಿಂಗ್ ಮಾಡುವ ಮೂಲಕ ಯುವಕರಲ್ಲಿ ಪ್ರೋತ್ಸಾಹ ಹಾಗೂ ಉತ್ಸಾಹವನ್ನು ತುಂಬಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ಎಸ್. ಬಿ ದಾನಪ್ಪಗೌಡರ, ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ಪುರಸಭೆಯ ಸದಸ್ಯ ಮಹಾಂತೇಶ ಕಲಾಲ, ಪುರಸಭೆ ಸದಸ್ಯ ಬಸವರಾಜ ಕಟ್ಟಿಮನಿ, ಐಡಿ ಪ್ರಭುಗೌಡ, ಬಸವರಾಜ ಕಾತರಕಿ ಉಪಸ್ಥಿತರಿದ್ದರು.
Kshetra Samachara
19/06/2022 07:05 pm