ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕರ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡದ ಬಾಲಕನಿಗೆ ಕಂಚಿನ ಪದಕ

 

ಧಾರವಾಡ: ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಜಾರ್ಖಂಡ್ ರಾಜ್ಯ ಕುಸ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ರಾಂಚಿಯಲ್ಲಿ ನಡೆದ 15 ವರ್ಷದೊಳಗಿನವರ  ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಧಾರವಾಡದ ಕುಸ್ತಿಪಟು  ಖ್ವಾಜಾಮೈನುದ್ದೀನ್ ಮಾಳಗಿ ಕಂಚಿನ ಪದಕ ಗೆದ್ದು  ಕರ್ನಾಟಕಕ್ಕೆ ಕೀರ್ತಿ  ತಂದಿದ್ದಾನೆ.

ಫ್ರೀಸ್ಟೈಲ್ ಕುಸ್ತಿಯ 52 ಕೆ.ಜಿ. ವಿಭಾಗದಲ್ಲಿ ಮಾಳಗಿ ತೃತೀಯ ಸ್ಥಾನ ಪಡೆದಿದ್ದಾನೆ. ದಾವಣಗೆರೆ ಕ್ರೀಡಾ ನಿಲಯದ ಕೋಚ್ ವಿನೋದ್ 

ಕುಮಾರ್ ಮತ್ತು ಶಿವಾನಂದ್ ಅವರ ಬಳಿಮಾಳಗಿ ತರಬೇತಿ ಪಡೆಯುತ್ತಿದ್ದಾನೆ. ಉದಯೋನ್ಮುಖ ಕುಸ್ತಿಪಟು ಮಾಳಗಿಯನ್ನು ಧಾರವಾಡದ ಎಲ್ಲ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/05/2022 07:17 pm

Cinque Terre

27.75 K

Cinque Terre

4

ಸಂಬಂಧಿತ ಸುದ್ದಿ