ಹುಬ್ಬಳ್ಳಿ: ಗೋಕುಲ ಗ್ರಾಮದ ಸುಕ್ಷೇತ್ರ ದಾರಾವತಿ ಹನುಮಾನ ದೇವಸ್ಥಾನದಲ್ಲಿ ಮೇ 13 ರಿಂದ ಮೇ 17 ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಿವೆ.
ಇಂದು ದಾರಾವತಿ ಹನುಮಾನ ದೇವಸ್ಥಾನದಲ್ಲಿ ಕಳಸಾರೋಹಣ, ಬಸವಣ್ಣ ಮಂಟಪ ಲೋಕಾರ್ಪಣೆ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ, ದೇವಸ್ಥಾನದ ಆವರಣದಲ್ಲಿ ರಾಷ್ಟ್ರಮಟ್ಟದ ಜಗ್ಗಿ ಕಾಟಾ ನಿಕಾಲಿ ಕುಸ್ತಿ ಸ್ಪರ್ಧೆ ಏರ್ಪಡಿಸಿದ್ದರು.
ಈ ಕುಸ್ತಿ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನ್ ಗಳು ಬಂದು ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಹನುಮಾನ ಭಕ್ತರು ಬಂದು ಕುಸ್ತಿ ನೋಡಿ ಸಿಳ್ಳೆ ಚಪ್ಪಾಳಿ ಹೊಡೆದು ಖುಷಿ ಪಟ್ಟರು.
Kshetra Samachara
17/05/2022 06:54 pm