ಹುಬ್ಬಳ್ಳಿ: ಪುಟಾಣಿ, ಸ್ಕೇಟರ್ ಸಿಯಾ ಅಜಯ್ ನಗರಾಳ್ ಎಂಬ ಬಾಲಕಿ ರಾಷ್ಟ್ರ ಮಟ್ಟಿದಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿಗೆ ಹೆಮ್ಮೆ ತಂದಿದ್ದಾರೆ.
ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಮೊಹಾಲಿಯಲ್ಲಿ 21ರಿಂದ 28 ಏಪ್ರಿಲ್ 2022ರವರೆಗೆ "1ನೇ ಇಂಡಿಯಾ ಸ್ಕೇಟ್ ರೋಲರ್ ಗೇಮ್ಸ್ 2022" ಅನ್ನು ಆಯೋಜಿಸಿತ್ತು. ಇದರಲ್ಲಿ 'ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ'ಯ ಸ್ಕೇಟರ್ ಸಿಯಾ ಅಜಯ್ ನಗರಾಳ್ (ಹೆರಿತಾನ್) 5-7 ಬಾಲಕಿಯರ ಇನ್‌ಲೈನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಬಾಲಕಿಗೆ ಅಕ್ಷಯ ಸೂರ್ಯವಂಶಿ ಅವರು ತರಬೇತಿ ನೀಡುತ್ತಿದ್ದಾರೆ. ಬಾಲಕಿಯ ಈ ಸಾಧನೆಗೆ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು, ಪೋಷಕರು ಮತ್ತು ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗುವಿನ ಸಾಧನೆಗೆ ತಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/05/2022 04:54 pm