ಕುಂದಗೋಳ: ಹೆಚ್ಚುತ್ತಿರುವ ಮೊಬೈಲ್ ಗೇಮ್ ಹಾವಳಿಗಳ ನಡುವೆ ಯುವಕರಲ್ಲಿ ಕ್ರೀಡಾ ಮನೋಭಾವ ಇಮ್ಮಡಿಗೊಳಿಸಲು, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಬೆನಕನಹಳ್ಳಿ ಗ್ರಾಮಸ್ಥರು ಮಾಡುತ್ತಿದ್ದಾರೆ.
ಬೆನಕನಹಳ್ಳಿಯ ಪ್ರಜಾಸತ್ತಾತ್ಮಕ ಯುವಕರ ಸಂಘ ಹಾಗೂ ಜೈ ಭಾರತ್ ಯುವಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿ ವಿಜೇತ ತಂಡಕ್ಕೆ ಬಹುಮಾನ ನೀಡಿದ್ದಾರೆ. ಶನಿವಾರ ಆಯೋಜನೆಗೊಂಡ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿ ಪ್ರಶಸ್ತಿ ಸುತ್ತಿಗಾಗಿ ಸೆಣಸಾಡಿದವು.
ಭಾನುವಾರ ಬೆಳಿಗ್ಗೆ ಮುಕ್ತಾಯ ಕಂಡ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಮುಮ್ಮಿಗಟ್ಟಿ ತಂಡ, ದ್ವೀತಿಯ ಬಹುಮಾನವನ್ನು ಹಿರೇಮ್ಯಾಗೇರಿ ತಂಡ, ತೃತೀಯ ಬಹುಮಾನವನ್ನು ಯಲ್ಲಾಪೂರ ತಂಡ, ಚತುರ್ಥ ಬಹುಮಾನವನ್ನು ಹಿರೆನೇರ್ತಿ ತಂಡ ಪಡೆದರೇ, ಉತ್ತಮ ತಂಡವಾಗಿ ಬೆನಕನಹಳ್ಳಿ ಕಬಡ್ಡಿ ಕ್ರೀಡಾಪಟುಗಳು ಸಂತೋಷಪಟ್ಟರು.
Kshetra Samachara
05/04/2022 09:14 am