ಕುಂದಗೋಳ : ಮಕ್ಕಳ ಕ್ರೀಡಾ ಪ್ರೇಮ, ನಮ್ಮದೆ ತಂಡ ಗೆಲ್ಲಬೇಕೆಂಬ ಆಸೆ ಅದಕ್ಕೆ ತಕ್ಕ ಪರಿಶ್ರಮ ಸಿಳ್ಳೆ ಚಪ್ಪಾಳೆ ಗೆಲುವಿನ ವಿಜಯೋತ್ಸವಕ್ಕೆ ಇಂದು ಮತ್ತೇ ಕುಂದಗೋಳ ಪಟ್ಟಣದ ಹರಭಟ್ಟ ಪದವಿ ಪೂರ್ವ ಕಾಲೇಜಿನ ಕ್ರೀಡಾ ಹಬ್ಬ ಸಾಕ್ಷಿಯಾಗಿದೆ.
ಇಂದು ತಾಲೂಕು ಮಟ್ಟದ ಕಾಲೇಜುಗಳ ಮಹಿಳಾ ಮತ್ತು ಪುರುಷರ ಖೋಖೋ, ಕಬಡ್ಡಿ ಆಟಗಳು ಅತಿ ಕುತೂಹಲದಿಂದ ನಡೆದು ಕಾಲೇಜು ವಿದ್ಯಾರ್ಥಿಗಳನ್ನು ಅಷ್ಟೇ ಪೈಪೊಟಿಗೆ ಮಟ್ಟಕ್ಕೆ ಕರೆತಂದುವು.
ವಿಧ್ಯಾರ್ಥಿನಿಯರ ಕಬಡ್ಡಿ ಮತ್ತು ಖೋಖೋ ಆಟದಲ್ಲಿ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದ್ರೇ, ವಿದ್ಯಾರ್ಥಿಗಳ ಖೋಖೋ ಆಟದಲ್ಲಿ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆಯಿತು, ವಿದ್ಯಾರ್ಥಿಗಳ ಕಬಡ್ಡಿ ಆಟದಲ್ಲಿ ಸಂಶಿಯ ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ನಾಳೆ ಸಹ ಕ್ರೀಡೆಗಳು ಮುಂದುವರೆದು ವಿದ್ಯಾರ್ಥಿಗಳ ಮಾನಸಿಕ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಲಿವೆ.
Kshetra Samachara
26/11/2021 10:41 pm