ಹುಬ್ಬಳ್ಳಿ: ಫ್ರೀ ಸೈಜ್ ಜೆರ್ಸಿ ತೊಟ್ಟು ಕಬ್ಬಡ್ಡಿ ಅಖಾಡದಲ್ಲಿ ಆಕ್ಟಿವ್ ಆಗಿರೋ ಗಂಡು ಹೈಕಳು. ಅಂದಹಾಗೆ ಇದು ಅಂತಾರಾಷ್ಟ್ರೀಯ ಪಂದ್ಯವಂತೂ ಅಲ್ಲ. ಆದರೆ ಪ್ರೊ ಕಬಡ್ಡಿ ನಿಯಮದ ಮಾದರಿಯಲ್ಲಿಯೇ ಆಟ ನಡೆಯಿತು. ಪರಿಣಾಮ ಜನರ ಬೆಂಬಲ ಮಾತ್ರ ಅಂತಾರಾಷ್ಟ್ರೀಯ ಪಂದ್ಯವನ್ನೂ ಮೀರಿಸುವಂತಿತ್ತು.
ಅಂದಹಾಗೆ ಇದು ಹುಬ್ಬಳ್ಳಿಯ ಜೆ.ಕೆ.ಸ್ಕೂಲ್ ಪಕ್ಕದಲ್ಲಿರುವ ಕ್ರಿಕೆಟ್ ಗ್ರೌಂಡ್ ನಲ್ಲಿ ಗ್ರಾಮೀಣ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಎ-1 ಸ್ಪೋರ್ಟ್ಸ್ ಅಸೋಸಿಯೇಷನ್ ಹು-ಧಾ ಜಿಲ್ಲಾ ಮಟ್ಟದ ಮೊದಲ ಬಾರಿಗೆ ಪ್ರೊ ಕಬಡ್ಡಿ ಮಾದರಿಯಲ್ಲಿ ಮುಕ್ತ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಜಿಲ್ಲಾ ಮಟ್ಟದ ಕಬಡ್ಡಿ ಕೂಟದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಯುವಕರು ತಂಡ ಕಟ್ಟಿಕೊಂಡು ಹಾಜರಾಗಿದ್ದರು.
ಒಟ್ಟಿನಲ್ಲಿ ದೇಸಿ ಆಟ ಕಬಡ್ಡಿಯನ್ನ ಉಳಿಸಿ ಬೆಳೆಸಬೇಕಾಗಿದ್ದು, ಇತರ ಕ್ರೀಡೆಗಳ ಜೊತೆಗೆ ಕಬಡ್ಡಿಗೂ ಉತ್ತೇಜನ ನೀಡಬೇಕಿದೆ. ಇಂದಿನ ಯುವ ಪೀಳಿಗೆಗೆ ಕಬಡ್ಡಿಯ ಮಹತ್ವ ಸಾರಬೇಕಿದೆ ಅನ್ನೋದು ಕಬಡ್ಡಿ ಪ್ರಿಯರ ಸಲಹೆ.
Kshetra Samachara
01/11/2021 04:07 pm