ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಾಜ್ಯಮಟ್ಟದ ಮ್ಯಾರಥಾನ್: ಸುನೀಲ್ ಪ್ರಥಮ, ಶಿವಾಜಿ ದ್ವೀತಿಯ, ನಾಗರಾಜ ತೃತೀಯ

ಕಲಘಟಗಿ: ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಯುವ ಕೇಸರಿ ಗೆಳೆಯರ ಬಳಗದಿಂದ ಜರುಗಿದ ರಾಜ್ಯಮಟ್ಟದ ಹತ್ತು ಕಿಲೋಮೀಟರ್ ಮ್ಯಾರಥಾನ್ ನಲ್ಲಿ ಹುಬ್ಬಳ್ಳಿಯ ಸುನಿಲ್ 36 ನಿಮಿಷ 13 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನವನ್ನು, ಶಿವಾಜಿ ಅಡಕಿನಕಲ್ಲು 36 ನಿಮಿಷ 23 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನವನ್ನು, ಹುಬ್ಬಳ್ಳಿಯ ನಾಗರಾಜ್ ದಿವಟಗಿ ತೃತೀಯ ಸ್ಥಾನವನ್ನು ಪಡೆದು ವಿಜೇತರಾಗಿದ್ದಾರೆ.

ಮೈಸೂರಿನ

ಲಕ್ಷ್ಮೀಶ್ ಸಿ.ಎಸ್ ಚತುರ್ಥ ಸ್ಥಾನವನ್ನು, ಸಂದೀಪ್ ಮಂಡ್ಯ ಐದನೇ ಸ್ಥಾನವನ್ನು, ಧಾರವಾಡದ ಸಚಿನ್ ಬಿರಡಿ ಆರನೇ ಸ್ಥಾನವನ್ನು,ಮೈಸೂರಿನ ಮಣಿಕಂಠ ಪಿ ಏಳನೇ ಸ್ಥಾನವನ್ನು,ಹುಬ್ಬಳ್ಳಿಯ ಪ್ರತಾಪ್ ಚಲವಾದಿ ಎಂಟನೇ ಸ್ಥಾನವನ್ನು,ಮೈಸೂರಿನ ರಘುವರನ್ ಸಿ ಒಂಬತ್ತನೇ ಸ್ಥಾನವನ್ನು ಹಾಗೂ ಹುಬ್ಬಳ್ಳಿಯ ಲಕ್ಷ್ಮಣ್ ಲಮಾಣಿ ಹತ್ತನೇ ಸ್ಥಾನವನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಬಹುಮಾನ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡುವುದರ ಮೂಲಕ ಗೌರವಿಸಲಾಯಿತು.

Edited By : Nagaraj Tulugeri
Kshetra Samachara

Kshetra Samachara

19/10/2021 12:07 pm

Cinque Terre

26.28 K

Cinque Terre

0

ಸಂಬಂಧಿತ ಸುದ್ದಿ