ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶ್ರವಣದೋಷ ಗೆದ್ದ ವಿದ್ಯಾರ್ಥಿನಿ, ಪೋಷಕರಿಗೆ ಇವಳೇ 'ನಿಧಿ'

ಧಾರವಾಡ: ಆಕೆ ಯಾವುದೇ ಚಂದುಳ್ಳಿ ಚಲುವೆಗಿಂತ ಕಡಿಮೆ ಕಾಣಲ್ಲ, ಬಿಕಾಂ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಳೆದ ತಿಂಗಳು ನಡೆದ ಶ್ರವಣದೋಷವುಳ್ಳವರ ಓಲಂಪಿಕ್ ನಲ್ಲಿ ಆಕೆ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ಆದರೆ, ಅವಳ ಸಾಧನೆಗೆ ಶ್ರವಣದೋಷ ಯಾವತ್ತೂ ಅಡ್ಡಿ ಬಂದಿಲ್ಲ. ಹಾಗಿದ್ರೆ ಯಾರು ಆಕೆ ಅಂತೀರಾ? ಈ ಸ್ಟೋರಿ ನೋಡಿ

ಹೀಗೆ ನಿಂತಿರುವ ಈ ಯುವತಿಯನ್ನೊಮ್ಮೆ ನೋಡಿ. ಇವಳು ನಿಧಿ ಸುಲಾಖೆ ಅಂತಾ. ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಇವಳು ಟೇಕ್ವಾಂಡೊ ಚಾಂಪಿಯನ್. ನೋಡೋಕೆ ಮುದ್ದಾಗಿರುವ ಈ ವಿದ್ಯಾರ್ಥಿನಿ, ಶ್ರವಣದೋಷವುಳ್ಳವಳು. ಆದರೆ ಈ ಸಮಸ್ಯೆ ಇವಳ ಸಾಧನೆಗೆ ಯಾವತ್ತೂ ಅಡ್ಡಿ ಬಂದಿಲ್ಲ. ಅಲ್ಲದೇ ನನಗೆ ಕಿವಿ ಕೇಳಿಸಲ್ಲ ಎಂಬ ಭಾವನೆ ಕೂಡಾ ಇವಳಿಗೆ ಇಲ್ಲಾ. ಸಾಧನೆ ಮಾಡಬೇಕು ಎಂಬ ಛಲ ಮಾತ್ರ ಇವಳಲ್ಲಿದೆ. ಧಾರವಾಡ ದಾನೇಶ್ವರಿನಗರದ ಈ ನಿಧಿ, ಹುಟ್ಟಿದಾಗಿನಿಂದ ಶ್ರವಣದೋಷದ ಸಮಸ್ಯೆ ಎದುರಿಸುತ್ತಿದ್ದಾಳೆ. ಇವಳ ಪೋಷಕರಿಗೆ ನಿಧಿ ಬಗ್ಗೆ ಸಾಕಷ್ಟು ಜನ ಏನೇನೋ ಮಾತನಾಡಿದ್ರು, ತಂದೆ ಮಾತ್ರ ಮಗಳಿಗೆ ಸಾಧನೆ ಮಾಡಿಸಬೇಕು ಎಂಬ ಛಲ ಬಿಡಲಿಲ್ಲ. ಆಕೆಯನ್ನ ಅಥ್ಲೆಟಿಕ್ನಲ್ಲಿ ಮುಂದೆ ತರಬೇಕು ಎಂದು ಕೋಚಿಂಗ್ ಕೊಡಿಸಿದರು. ಅದೇ ರೀತಿ ಆಕೆ ನೂರು ಹಾಗೂ ಎರಡು ನೂರು ಮೀಟರ್ ಓಟದಲ್ಲಿ ಮೆಡಲ್ ಕೂಡ ತಂದಳು. ಅಲ್ಲದೇ ಜಾವೆಲಿನ್ ಥ್ರೋದಲ್ಲಿ ಕೂಡಾ ಇವಳು ಎತ್ತಿದ ಕೈ. ಇವಳು ತನ್ನ ರಕ್ಷಣೆಯನ್ನ ತಾನೇ ಮಾಡಿಕೊಳ್ಳಲಿ ಎಂದು ತಂದೆ ಇವಳಿಗೆ ಟೇಕ್ವಾಂಡೊ ಕೋಚಿಂಗ್ ಗೆ ಹಚ್ಚಿದ್ರು. ಹೀಗೆ ಟೇಕ್ವಾಂಡೊ ಕಲಿತ ನಿಧಿ, ಕಳೆದ ತಿಂಗಳು ಬ್ರೇಜಿಲ್ ನಲ್ಲಿ ನಡೆದ ಶ್ರವಣದೋಷವುಳ್ಳವರ ಓಲಂಪಿಕ್ ನಲ್ಲಿ, 67 ಕಿಲೋ ವಿಭಾಗದಲ್ಲಿ ಭಾಗವಹಿಸಿದ್ದಳು. ಅಲ್ಲದೇ ಭಾರತದಿಂದ ಈ ವಿಭಾಗದಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾಳೆ.

ಬ್ರೇಜಿಲ್ನಲ್ಲಿ ನಡೆದ ಈ ಮಾರ್ಷಲ್ ಆರ್ಟ್ ನ ಟೇಕ್ವಾಂಡೊದಲ್ಲಿ ನಿಧಿ ಭಾರತಕ್ಕೆ ನಾಲ್ಕನೇ ಸ್ಥಾನ ತಂದು ಕೊಟ್ಟಿದ್ದಾಳೆ. ಅಲ್ಲಿ ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸಿಕೊ ಎರಡನೇ ಸ್ಥಾನ ಪಡೆದುಕೊಂಡಿವೆ. ಒಟ್ಟು 70 ರಾಷ್ಟ್ರಗಳು ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಇವಳ ಈ ಸಾಧನೆಗೆ ಸರ್ಕಾರಿ ಕಾಲೇಜು ಕೂಡ ಹೆಮ್ಮೆ ಪಟ್ಟಿದೆ.

ಒಟ್ಟಿನಲ್ಲಿ ತಂದೆ ಕನಸನ್ನು ನನಸು ಮಾಡಲು ಈ ನಿಧಿಗೆ ಯಾವುದೇ ಶ್ರವಣದೋಷ ಅಡ್ಡಿ ಬಂದಿಲ್ಲ. ಅಲ್ಲದೇ ಇಡೀ ಜಗತ್ತಿನಲ್ಲಿ ನಿಧಿ, ನಮ್ಮ ಭಾರತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/06/2022 05:29 pm

Cinque Terre

78.05 K

Cinque Terre

7

ಸಂಬಂಧಿತ ಸುದ್ದಿ