ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಈ ಜಟ್ಟಿ ಭಾರಿ ಗಟ್ಟಿ: ಬೀಸಿ ಒಗೆದನು ಸಂಗ್ರಾಣಿ ಕಲ್ಲು ಎತ್ತಿ

ನವಲಗುಂದ : ಬಂಡಾಯದ ನೆಲದಲ್ಲಿ ನಡೆದ ಪೈಲ್ವಾನನ ಶಕ್ತಿ ಪ್ರದರ್ಶನವನ್ನು ವೀಕ್ಷಿಸಿಸಲು ನೂರಾರು ಜನ ನೆರೆದಿದ್ದರು. ಸಿಳ್ಳೆ ಕೇಕೆಯಿಂದ ಹುರಿದುಂಬಿಸಿ, ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಕುಮಾರ ಶಿವಾನಂದ ಯಲ್ಲಪ್ಪ ಕಾಳಿ ಅವರ ಪ್ರದರ್ಶನಕ್ಕೆ ನಿಬ್ಬೆರಗಾದರು.

ರೈತ ಸೇನಾ ಕರ್ನಾಟಕ, ಗ್ರಾಮ ಘಟಕ ತಿರ್ಲಾಪುರ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅದ್ಭುತ ಶಕ್ತಿ ಪ್ರದರ್ಶನ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಬಸ್ ನಿಲ್ದಾಣದ ಬಳಿಯ ವೆಂಕರೆಡ್ಡಿ ಶಿವರೆಡ್ಡಿ ವೀರರೆಡ್ಡಿ ಎಂಬುವವರಿಗೆ ಸೇರಿದ ಬಯಲು ಜಾಗದಲ್ಲಿ ಆಯೋಜಿಸಲಾಗಿತ್ತು.

ವೆಂಕಣ್ಣ ಹುಲಕೋಟಿಯವರ ಶಿಷ್ಯನಾದ ಕುಮಾರ ಶಿವಾನಂದ ಯಲ್ಲಪ್ಪ ಕಾಳಿ ಅವರಿಂದ ಅದ್ಭುತ ಶಕ್ತಿ ಪ್ರದರ್ಶನ ತೋರಲಾಯಿತು. ಪೈಲ್ವಾನನಿಗೆ 40 ಕೆಜಿ ಇಂದ 66 ಕೆಜಿ ಅವರಿಗೆ 13 ಸಂಗ್ರಾಣಿ ಕಲ್ಲುಗಳನ್ನು ಸಿಡಿ ಹೊಡೆಯುವುದು, 68, 70, 72 ಕೆಜಿವರೆಗಿನ 3 ಕಲ್ಲುಗಳನ್ನು ಕೈ ಊರಿ ಸಿಡಿ ಹೊಡೆಯುವಂತದ್ದು ಸೇರಿದಂತೆ ಇನ್ನು ಹಲವು ಸವಾಲುಗಳನ್ನು ಪ್ರದರ್ಶಿಸಿ, ಬಲೇ ಎನಿಸಿಕೊಂಡರು.

Edited By : Manjunath H D
Kshetra Samachara

Kshetra Samachara

23/03/2022 09:11 pm

Cinque Terre

44.2 K

Cinque Terre

1

ಸಂಬಂಧಿತ ಸುದ್ದಿ