ಹುಬ್ಬಳ್ಳಿ: ಫಸ್ಟ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಸ್ಕೈ 360 ಅಂಡರ್ -14 ಇಂಟರ್ ಕ್ಯಾಂಪ್ ಟೂರ್ನಮೆಂಟ್ ಅಂತಿಮ ಘಟ್ಟವನ್ನು ತಲುಪಿದ್ದು, ಇದೇ 20ರಂದು ರವಿವಾರ ಫೈನಲ್ ಮ್ಯಾಚ್ ಜೊತೆಗೆ ಸಮಾರೋಪ ಸಮಾರಂಭವನ್ನು ಹುಬ್ಬಳ್ಳಿಯ ಜಮಖಾನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫಸ್ಟ್ ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕರಾದ ಸಂದೀಪ ಪೈ ಹೇಳಿದರು.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,ಈಗಾಗಲೇ ನಿರೀಕ್ಷಿತ ಮಟ್ಟಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಟೂರ್ನಮೆಂಟ್ ಜರುಗಿರುವುದು ನಿಜಕ್ಕೂ ಖುಷಿ ಸಂಗತಿಯಾಗಿದೆ.ಈಗಾಗಲೇ ಹಲವಾರು ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಟೂರ್ನಮೆಂಟ್ ಗೆ ಮೆರುಗನ್ನು ತಂದಿರುವುದು ವಿಶೇಷವಾಗಿದೆ ಎಂದರು.
ಅಂದು ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ವರ್ಣಾ ಗ್ರೂಪ್ ಮಾಲೀಕರಾದ ಡಾ.ವಿ.ಎಸ್.ವಿ.ಪ್ರಸಾದ,ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿಯವರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಆರ್.ಬಿ.ಎಲ್ ಬ್ಯಾಂಕ್ ವಲಯ ವ್ಯವಸ್ಥಾಪಕರಾದ ಪ್ರಸಾದ ಬಾಸೂದಕರ,ಅರುಣ ಸನ್ ಸೋಲಾರ್ ಮಾಲೀಕರಾದ ಕ್ಯಾಪ್ಟನ್ ಅರುಣಕುಮಾರ ಚಿಮ್ಮಲಗಿ, ಸ್ಕೈ 360 ಸೊಲ್ಯೂಷನ್ ಮಾಲೀಕರಾದ ಸಂದೀಪ ಪಾಟೀಲ ಹಾಗೂ ಸಹ ಉದ್ಯೋಗಿಗಳು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಬಿಡಿಕೆ ಕೋಲ್ಟ್ಸ್ ತಂಡದ ಓಪನಿಂಗ್ ಜೊತೆಯಾಟದಲ್ಲಿ
ರೋಹಿತ ಏರೆಶಮಿ(202 ನಾಟ್ ಔಟ್) ಮಹಮ್ಮದ್ ಶಮಿ(167 ನಾಟ್ ಔಟ್)412 ರನ್ ಗಳಿಸಿರುವುದು ಟೂರ್ನಮೆಂಟ್ ಗೌರವವನ್ನು ಇಮ್ಮಡಿಗೊಳಿಸಿದೆ. ಬಿಡಿಕೆ ಕೋಲ್ಟ್ಸ್ ಮತ್ತು ಆನಂದ ಕ್ರಿಕೆಟ್ ಅಕಾಡೆಮಿ ಬೆಳಗಾವಿ ಇವರ ನಡುವೆ ನಡೆದ ಪಂದ್ಯ ಮೊದಲು ಟೈ ಆಗಿ ಸೂಪರ್ ಓವರ್ ನಲ್ಲಿ ಕೂಡ ಟೈ ಆಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟು ನಡೆದಿರುವ ಹತ್ತು ಮ್ಯಾಚ್ ನಲ್ಲಿ ಎರಡು ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರವನ್ನು ಮಹಿಳೆಯರು ಪಡೆದಿರುವುದು ವಿಶೇಷವಾಗಿದೆ. ಲಕ್ಷ್ಮೀ ಬಾಗೇವಾಡಿ ಹಾಗೂ ಚಿನ್ಮಯಿ ಪಡೆದಿದ್ದಾರೆ.ಇನ್ನೂ ಬೌಲಿಂಗ್ ವಿಭಾಗದಲ್ಲಿ ಷಹಬಾಜ್ ಜಮಖಂಡಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಮೂಲಕ ಮೂಕ ವಿಸ್ಮಿತರನ್ನಾಗಿ ಮಾಡಿದ್ದಾರೆ.ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ 6 ಓವರ್ ಗಳಲ್ಲಿ 5 ಮೇಡನ್ ಮಾಡುವ ಮೂಲಕ 01 ರನ್ ನೀಡಿ 03 ವಿಕೆಟ್ ಪಡೆದಿರುವುದು ವಿಶೇಷವಾಗಿದೆ.ಟೂರ್ನಮೆಂಟ್ ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿ,ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
Kshetra Samachara
18/12/2020 01:58 pm