ಕುಂದಗೋಳ: ಇನ್ನೇನು ಕೆಲವೇ ದಿನಗಳಲ್ಲಿ ರೈತಾಪಿ ಸಂಭ್ರಮದ ನೂತನ ವರ್ಷದ ಯುಗಾದಿ ಬರಲಿದೆ. ಈ ಯುಗಾದಿ ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಖಾದ್ಯವೇ ಶಾವಿಗೆ. ಈ ಕಾರಣ ಈಗಾಗಲೇ ಹಳ್ಳಿಗಳಲ್ಲಿ ಶಾವಿಗೆ ಮಾಡುವ ಕಾಯಕದಲ್ಲಿ ಮಹಿಳೆಯರು ನಿರತರಾಗಿದ್ದಾರೆ.
ಯುಗಾದಿ, ದೀಪಾವಳಿ, ನಿಶ್ಚಿತಾರ್ಥ, ಮದುವೆ ಹೀಗೆ ನಾನಾ ಹಬ್ಬ ಹಾಗೂ ಆಚರಣೆಗಳಲ್ಲಿ ಪ್ರಮುಖವಾದ ಸಿಹಿ ಪದಾರ್ಥ ಶಾವಿಗೆ ಮಾಡಿಸುವ ಕಾರ್ಯದಲ್ಲಿ ಮಹಿಳೆಯರು ತೊಡಗಿ ಯಂತ್ರಗಳ ಸಹಾಯದಿಂದ ಶಾವಿಗೆ ಮಾಡಿಸುತ್ತಿದ್ದಾರೆ.
ವಿಶೇಷವಾಗಿ ಈ ಶಾವಿಗೆ ಮಾಡುವ ಕಾರ್ಯ ಅಂದ್ರೆ, ಹಳ್ಳಿ ಮಹಿಳೆಯರಿಗೆ ಒಂಥರಾ ವಿಶೇಷ, ತಾವಷ್ಟೇ ಅಲ್ಲದೇ ವಠಾರದ ಮಹಿಳೆಯರು ಸೇರಿ ತಮ್ಮ ಮನೆ ಬೀಗರ ಮನೆ ಲೆಕ್ಕವಿಟ್ಟು ಶಾವಿಗೆ ಮಾಡಿಸುವ ಸುಗ್ಗಿ ನಿಜಕ್ಕೂ ಸಂತೋಷ.
ಇದೇ ಮೊದ ಮೊದಲು ಮಣೆಯಿಟ್ಟು ಮಹಿಳೆಯರೆಲ್ಲಾ ಒಂದಾಗಿ ಹೊಸೆಯುತ್ತಿದ್ದ ಶಾವಿಗೆ ಬದಲಾಗಿ, ಯಂತ್ರ ಆಧಾರಿತ ಆಯಾಸವಿಲ್ಲದ ಶಾವಿಗೆ ಪಡೆಯಲು ಮಹಿಳೆಯರು ಮುಂದಾಗಿದ್ದಾರೆ. ಒಟ್ಟಾರೆ ಯಂತ್ರದಿಂದ ಶಾವಿಗೆ ತಯಾರಿಸುವ ಕೆಲಸಕ್ಕೆ ಮಹಿಳೆಯರು ಮುಂದಾಗಿ ವರ್ಷ ಪೂರ್ತಿ ಬೇಕಾದ ಶಾವಿಗೆ ಹಾಗೂ ಮನೆ ಬಳಕೆಯ ಖಾರ ಕುಟ್ಟಿಸುವ ಕೆಲಸದಲ್ಲಿ ಮಹಿಳೆಯರು ತೊಡಗಿದ್ದಾರೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ
Kshetra Samachara
29/03/2022 08:21 am