ಹುಬ್ಬಳ್ಳಿ: ಅವರೆಲ್ಲ ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು.ಕಾಲೇಜಿನ ಪ್ರತಿಷ್ಠೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ವಿನೂತನ ಪ್ರಯೋಗವೊಂದನ್ನು ಕೈಗೆತ್ತಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಯೋಗದಿಂದ ದೇಶವನ್ನೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ಹಾಗಿದ್ದರೇ ಯಾರು ಆ ವಿದ್ಯಾರ್ಥಿಗಳು ಅವರು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್ಇ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಯುಕ್ತವಾದ ರೋಬೋಟ್ ಅನ್ವೇಷಣೆ ಮಾಡಿದ್ದು, ಎಲ್ಲರ ಚಿತ್ತವನ್ನು ಹುಬ್ಬಳ್ಳಿ ಕೆಎಲ್ಇ ತಾಂತ್ರಿಕ ವಿದ್ಯಾಲಯದತ್ತ ಸೆಳೆದಿದ್ದಾರೆ. ಅಟೋಮೇಷನ್ ಆ್ಯಂಡ್ ರೋಬೋಟಿಕ್ ವಿಭಾಗದ ವಿದ್ಯಾರ್ಥಿಗಳು ಸ್ವಯಂಚಾಲಿತ ರೋಬೋಟ್ ಕಂಡು ಹಿಡಿದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು. ಈಗಾಗಲೇ ನಾವೆಲ್ಲ ಹತ್ತು ಹಲವಾರು ವಿಧದ ರೋಬೋಟ್‌ಗಳನ್ನು ನೋಡಿದ್ದೇವೆ. ಆದರೆ ಈ ರೋಬೋಟ್ ವಿವಿಧ ರೋಬೋಟ್‌ಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಸ್ವಯಂಚಾಲಿತ ರೋಬೋಟ್ ಸೆನ್ಸಾರ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಬ್ಯಾಟರಿ ಆಫ್ ಆದ ಸಂದರ್ಭದಲ್ಲಿ ತನ್ನಷ್ಟಕ್ಕೆ ತಾನೇ ಲಾಕ್ ಆಗಿ ತಾನೇ ಚಾರ್ಜ್ ಮಾಡಿಕೊಳ್ಳುವಂತ ವಿಶಿಷ್ಟ ರೀತಿಯ ತಂತ್ರಜ್ಞಾನವನ್ನು ಈ ರೋಬೋಟ್ ಹೊಂದಿದ್ದು, ಈ ರೋಬೋಟ್‌ಗೆ ಮಾಯಾ ಎಂದು ಹೆಸರಿಟ್ಟಿದ್ದಾರೆ.
ಇನ್ನೂ ಈ ರೋಬೋಟಿಕ್ ಅನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡಲು ಹಾಗೂ ಎಲ್ಲ ಗ್ರಾಹಕರಿಗೆ ಡಿಜಿಟಲ್ ತಂತ್ರಜ್ಞಾನ ಪರಿಚಯಿಸಲು ಹಾಗೂ ಅನಕ್ಷರಸ್ಥ ಗ್ರಾಹಕರಿಗೆ ಬ್ಯಾಂಕಿಂಗ್ ಗೊಂದಲ ನಿವಾರಣೆ ಮಾಡುವ ಸದುದ್ದೇಶದಿಂದ ಫೇಸ್ (ಮುಖಭಾಷೆ) ರೆಕಗ್ನೈಜೇಷನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಒಮ್ಮೆ ಒಬ್ಬ ವ್ಯಕ್ತಿಯ ಮುಖವನ್ನು ಪರಿಚಯಿಸಿ ದಾಖಲೆಗಳನ್ನು ಪರಿಚಯಿಸಿದರೇ ಇದು ಆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದನ್ನು ಸುಮಾರು ಎಂಟು ತಿಂಗಳ ಕಾಲಾವಧಿಯಲ್ಲಿ 5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ರೋಬೋಟಿಕ್ ವಿಭಾಗದ ವಿದ್ಯಾರ್ಥಿಗಳ ಈ ಕಾರ್ಯ ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳ ಕೀರ್ತಿಯನ್ನು ಹೆಚ್ಚಿಸಿದೆ.
ಬ್ಯಾಂಕಿನಲ್ಲಿ ಗ್ರಾಹಕ ಮಿತ್ರ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಅದಕ್ಕಿಂತ ಗುಣಮಟ್ಟದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.ಕಲಿತ ಶಿಕ್ಷಣ ಸಂಸ್ಥೆಗೆ ಹೆಸರನ್ನು ತರಬೇಕು ಎಂಬುವಂತ ಸದುದ್ದೇಶದಿಂದ ವಿದ್ಯಾರ್ಥಿಗಳು ವಿನೂತನ ಪ್ರಯತ್ನ ನಡೆಸಿದ್ದು, ದೇಶದಲ್ಲಿಯೇ ಮೊದಲ ಸ್ವಯಂಚಾಲಿತ ಹಾಗೂ ಸ್ವಯಂ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವ ರೊಬೋಟ್ ಕಂಡು ಹಿಡಿದಿದ್ದು, ಹುಬ್ಬಳ್ಳಿ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ.
Kshetra Samachara
29/01/2021 03:48 pm