ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನೂಲು ಹುಣ್ಣಿಮೆ ಪ್ರಯುಕ್ತ ಶಾಂತಿನಾಥರಿಗೆ ಪಂಚಾಮೃತ ಅಭಿಷೇಕ

ಕುಂದಗೋಳ: ನೂಲು ಹುಣ್ಣಿಮೆ ಪ್ರಯುಕ್ತವಾಗಿ ಇಲ್ಲಿನ ಜೈನ ಬಸದಿಯಲ್ಲಿ ಶಾಂತಿನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಗಿದೆ.

ಹೌದು.. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ 1008 ಶಾಂತಿನಾಥ ಜೈನ ಬಸದಿಯಲ್ಲಿ ಜೈನ ಧರ್ಮದ ಶ್ರಾವಕ ಶ್ರಾವಕಿಯರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಇದೇ ಸಂದರ್ಭದಲ್ಲಿ ಜೈನ ಧರ್ಮದ ಶ್ರಾವಕರು ತಮ್ಮ ತಮ್ಮ ಜನಿವಾರ ಬದಲಾಯಿಸಿಕೊಂಡರು, ಪಂಚಾಮೃತ ಪೂಜಾ ಅಭಿಷೇಕ ಕಾರ್ಯಕ್ರಮವನ್ನು ಧನಪಾಲ ಮಲ್ಲಿಗವಾಡ ನೆರವೇರಿಸಿದರು. ಇನ್ನು ಪಂಚಾಮೃತ ಅಭಿಷೇಕ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಧರ್ಮದ ಬಂಧು ಬಾಂಧವರು ಸಹ ಪಾಲ್ಗೊಂಡಿದ್ದರು. ಪ್ರತಿ ವರ್ಷ ನೂಲು ಹುಣ್ಣಿಮೆ ಅಂಗವಾಗಿ ಈ ಪಂಚಾಮೃತ ಅಭಿಷೇಕ ಹಲವಾರು ವರ್ಷಗಳಿಂದ ನೆರವೇರುತ್ತಾ ಬಂದಿದ್ದು ಲೋಕದ ಒಳಿತಿಗಾಗಿ ಪಾರ್ಥನೆ ನಡೆಯುತ್ತಿದೆ.

Edited By :
Kshetra Samachara

Kshetra Samachara

12/08/2022 03:45 pm

Cinque Terre

10.61 K

Cinque Terre

0

ಸಂಬಂಧಿತ ಸುದ್ದಿ