ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಜುಲೈ 2 ಮತ್ತು 3 ರಂದು ಜಗದ್ಗುರುಗಳಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ

ಹುಬ್ಬಳ್ಳಿ : ಶ್ರೀಮದ್ ರಂಭಾಪುರೀ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಜುಲೈ 2 ಮತ್ತು 3 ರಂದು ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ ಎಂದು ಎನ್. ಎ. ಚರಂತಿಮಠ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಂಪರೆ ಪುನರ್ ಮನನ ಧರ್ಮಸಮಾರಂಭ ಹಾಗೂ ಶ್ರೀ ಹಿಮಪತ್ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳಿಂದ ನಡೆಯುವ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯು ನಗರದ ಗೋಕುಲ್ ರಸ್ತೆಯ ಕೋಟಿಲಿಂಗ ನಗರದ ಶ್ರೀ ರಾಜೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.

ಜು. 2 ರಂದು ಸಂಜೆ 6 ಗಂಟೆಗೆ ಹಾಗೂ ಜು. 3 ರಂದು ಬೆ. 7:45 ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ದಿ. 2 ರಂದು 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಪ್ರಿಯ ಕಣ್ಣಿನ ಆಸ್ಪತ್ರೆ ಮತ್ತು ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ 3:30 ಕ್ಕೆ ಶೋಭಾ ಯಾತ್ರೆ ಕಾರ್ಯಕ್ರಮವು ಗೋಕುಲ್ ರಸ್ತೆಯಲ್ಲಿನ ಬಸವೇಶ್ವರ ನಗರದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಪೂರ್ಣಕಂಭ ಮತ್ತು ಜಾನಪದ ಕಲಾಮೇಳಗಳೊಂದಿಗೆ ಹೊರಟು ಕೋಟಿಲಿಂಗ ನಗರದಲ್ಲಿರುವ ಶ್ರೀ ರಾಜೇಶ್ವರ ಸಮುದಾಯ ಭವನದಲ್ಲಿ ಮುಕ್ತಾಯಗೊಳ್ಳುತ್ತದೆ ಎಂದರು.

ಸಂಜೆ 5:30 ಕ್ಕೆ ಧರ್ಮಕಂಕಣ ಧಾರಣೆ ಧ್ವಜ ಸಂಕಲ್ಪ, ಸಂಜೆ 5:45 ಕ್ಕೆ ಉಭಯ ಜಗದ್ಗುರುಗಳಿಂದ ಧರ್ಮಧ್ವಜ ವಂದನೆ, ಸಂಜೆ 6 ಕ್ಕೆ ಧರ್ಮಸಭೆ ನಂತರ ಧರ್ಮ ಸಮಾರಂಭ ನಡೆತಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೇಹೊನ್ನೂರಿನ ರಂಭಾಪುರಿ ಶ್ರೀ ವೀರಸಿಂಹಾನಾಧೀಶ್ವರ ಸ್ವಾಮೀಜಿ ವಹಿಸಲಿದ್ದು, ಮುಕ್ತಿ ಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಅಮ್ಮಿನಭಾವಿಯ ಶ್ರೀ ಅಭಿನವಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಸ್ತಾವಿಕ ನುಡಿಗಳನ್ನು ಡಾ. ಎನ್.ಎ. ಚರಂತಿಮಠ ನಡೆಸಿಕೊಡಲಿದ್ದಾರೆ.

ದಿ. 3 ರಂದು ಬೆಳಿಗ್ಗೆ 7 ಘಂಟೆಯಿಂದ ಶ್ರೀ ಹಿಮವತ್ ಕೇದಾರ ಭೀಮಾಶಂಕರ ಜಗದ್ಗುರುಗಳವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಜರಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಗದೀಶ ಗಡಗುಂಟಿ, ಬಸಯ್ಯ ಹಿರೇಮಠ, ಶಂಕ್ರಣ್ಣ ಮುನವಳ್ಳಿ ಸೇರಿದಂತೆ ಹಲವಾರು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ಉರಣಕರ, ಗಂಗಾಧರ ಹಿರೇಮಠ, ಮಹಾಂತೇಶ ಕುಮಟಗಿ, ಜಗದೀಶ ಗುಡಗಂಟಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

28/06/2022 02:36 pm

Cinque Terre

36.89 K

Cinque Terre

0

ಸಂಬಂಧಿತ ಸುದ್ದಿ