ಕಲಘಟಗಿ: ಮಾನವರು ಸಾತ್ವಿಕ ವಿಚಾರಗಳಿಂದ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ರಾಗ ದ್ವೇಷಾದಿಗಳಿಂದ ದೇವರ ಒಲುಮೆ ಪಡೆದು ಕೊಳ್ಳಲು ಸಾಧ್ಯವಿಲ್ಲ ಕಲಿಯುಗದಲ್ಲಿ ಭಗವಂತನ ಕೃಪೆಗೆ ಪಾತ್ರರಾಗಲು ಭಕ್ತಿಮಾರ್ಗದಿಂದ ಮಾತ್ರ ಸಾಧ್ಯ ಎಂದು ಕರ್ಕಿ ಸಂಸ್ಥಾನ ಮಠದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಜಿಗಳು ನುಡಿದರು
ಅವರು ಪಟ್ಟಣದ ಎಲೆ ಪೇಟೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಕ್ರರನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ದಿನಮಾನಗಳಲ್ಲಿ ಧರ್ಮ, ಧರ್ಮಗಳ ಕಿತ್ತಾಟದಿಂದ ಭಕ್ತಿಗಿಂದ ದ್ವೇಷಸಾಧನೆಯೊಂದೆ ಎದ್ದು ಕಾಣುತ್ತಿದ್ದು ಇದು ಸನ್ಮಾರ್ಗವಲ್ಲ ಎಂದರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಹೊಮ ಹವನಗಳ ಮೂಲಕ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂಜಾ ಕೈಂಕರ್ಯಗಳು ಜರುಗಿದವು. ಸುಮಂಗಲೆಯರು ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು.
ಮಹಾ ಪ್ರಸಾದ ಸೇವೆಯನ್ನು ದೇವಸ್ಥಾನದ ಧರ್ಮಧರ್ಶಿ ಗಣೇಶ ವೇರ್ಣೆಕರ ಏರ್ಪಡಿಸಿದ್ದರು.
ಆನಂದ ವೇರ್ಣೆಕರ,ಸುರೇಶ ವೇರ್ಣೆಕರ,ವಿಲಾಸ ವೇರ್ಣೆಕರ,ಮಂಜುನಾಥ ಕಾಗಲಕರ,ಪ್ರಕಾಶ ರಾಯಕರ, ಧಿಲಫಕ ರೇವಣಕರ,ಬಾಳು ಖಾನಾಪೂರ ಪಾಲ್ಗೊಂಡಿದ್ದರು.
Kshetra Samachara
23/04/2022 09:56 am