ಕುಂದಗೋಳ: ದೇಶಪಾಂಡೆನಗರದ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಯಲ್ಲಮ್ಮದೇವಿ ಬಂಡಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಕುಂದಗೋಳ ಪಟ್ಟಣದಲ್ಲಿ ವಿಜೃಂಭಣೆಯಿಂದ ಸಂಚರಿಸಿತು.
ಹೌದು! ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಕುಂದಗೋಳದಲ್ಲಿ ಪಲ್ಲಕ್ಕಿ ಜೊತೆ ಜೊತೆಗೆ ಜೋಡೆತ್ತುಗಳ ಸಾಲು ಸಾಲು ಮೆರವಣಿಗೆಯಲ್ಲಿ ಸಂಚರಿಸಿ ತಾಯಿ ಯಲ್ಲಮ್ಮದೇವಿಯ ಪಲ್ಲಕ್ಕಿಗೆ ಭಕ್ತರು ಹೂ ಹಣ್ಣು ಸಮರ್ಪಿಸಿದರು.
ಬೃಹತ್ ಕರಿ ಬಂಡಿಯಲ್ಲಿ ಹೂಗಳ ಅಲಂಕಾರದ ತಾಯಿ ಯಲ್ಲಮ್ಮದೇವಿಯ ಭಾವಚಿತ್ರದ ಮೆರವಣಿ ಕುಂದಗೋಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲೋಕದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದವು.
Kshetra Samachara
21/04/2022 09:58 pm