ಹುಬ್ಬಳ್ಳಿ: ಕೊರೊನಾ ಕಾರಣದಿಂದ ಎರಡು ವರ್ಷಗಳಲ್ಲಿ ಬ್ರೇಕ್ ಹಾಕಿದ್ದ ಶ್ರೀ ಚಾಂಗದೇವ ಮಹಾರಾಜರ ಉರುಸು ನಡೆದಿರಲಿಲ್ಲ. ಆದ್ರೆ ಈ ವರ್ಷ ಶ್ರೀ ಚಾಂಗದೇವ ಮಹಾರಾಜರ ಉರುಸನ್ನು ಭಕ್ತರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.
ಹುಬ್ಬಳ್ಳಿಯ ಜನತಾ ಬಜಾರದಲ್ಲಿನ ಸೂಪರ್ ಮಾರ್ಕೆಟ್‌ನಲ್ಲಿರುವ ಶ್ರೀ ಚಾಂಗದೇವ ಮಹಾರಾಜರ ಉರುಸು ಇಂದು ವೈಭವದಿಂದ ಜರುಗಿತು. ಸತತವಾಗಿ 30 ವರ್ಷಗಳಿಂದ ಉರುಸು ಹಮ್ಮಿಕೊಳ್ಳುತ್ತಾ ಬಂದಿದ್ದು, ನೂರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು, ಸಕ್ಕರೆ, ಹೂ, ಉಪ್ಪು ಸೇರಿದಂತೆ ಚಾಂಗದೇವರಿಗೆ ಸಮರ್ಪಸಿ, ಭಕ್ತಾದಿಗಳು ದರ್ಶನಾಶೀರ್ವಾದ ಪಡೆಯಲು ಮುಂದಾದರು.
Kshetra Samachara
23/03/2022 02:48 pm