ವರದಿ: ಬಿ.ನಂದೀಶ
ಅಣ್ಣಿಗೇರಿ ; ಪಟ್ಟಣದ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಟ್ರಸ್ಟ್ ನ ಸದಸ್ಯರು ಹಾಗೂ ಪಟ್ಟಣದ ಸದ್ಭಕ್ತರು ಮತ್ತೆ ಮಠಕೆ ಕರೆ ತರಲು ನಿರ್ಧರಿಸಿದ್ದಾರೆ.
ಕಳೆದ ಆರು ತಿಂಗಳಿಂದ ಟ್ರಸ್ಟಿನ ಕೆಲವು ಸದಸ್ಯರ ವರ್ತನೆಯಿಂದ ಬೇಸತ್ತ ಶ್ರೀಗಳು ಮಠದಿಂದ ಹೊರ ನಡೆದಿದ್ದರು, ಆದರೆ ಪಟ್ಟಣದ ಸದ್ಭಕ್ತರು ಹಾಗೂ ಟ್ರಸ್ಟಿನ ಸದಸ್ಯರು ಜನವರಿ 6ರಂದು ಅಂದರೆ ಇದು ಬೆಳಿಗ್ಗೆ11:00 ಗಂಟೆಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಆಗಮಿಸಿ ಶ್ರೀ ಸಿದ್ಧಾರೂಢ ಮಠದ ಟ್ರಸ್ಟಿನ ಸಮ್ಮುಖದಲ್ಲಿ ಶ್ರೀಗಳಿಗೆ ಆದ ಅನ್ಯಾಯದ ಬಗ್ಗೆ ಚರ್ಚಿಸಿ, ಅಣಿಗೇರಿ ದಾಸೋಹ ಮಠದ ಟ್ರಸ್ಟಿನ ಸದಸ್ಯರು ಹಾಗೂ ಸದ್ಭಕ್ತರ ಸಮ್ಮುಖದಲ್ಲಿ ಕ್ಷಮೆಯಾಚಿಸಿ ಶ್ರೀಗಳನ್ನು ಮಠಕ್ಕೆ ಮರಳಿ ಕರೆತರಲಾಗುತ್ತದೆ ಎಂದು ಭಕ್ತವೃಂದ ತಿಳಿಸಿದೆ.
2009 ರಲ್ಲಿ ಅಣ್ಣಿಗೇರಿಯ ಪಟ್ಟಣದ ದಾಸೋಹ ಮಠಕ್ಕೆ ಶ್ರೀಗಳನ್ನು ಹಲವಾರು ಸ್ವಾಮೀಜಿಗಳು ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಭಕ್ತರ ಸಮ್ಮುಖದಲ್ಲಿ ಪಟ್ಟಾಧಿಕಾರ ಮಾಡಿಸಲಾಗಿತ್ತು.
Kshetra Samachara
06/01/2022 10:30 am