ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಅಮೃತೇಶ್ವರ ಜಾತ್ರಾಮಹೋತ್ಸವ

ಅಣ್ಣಿಗೇರಿ : ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದ ಪಟ್ಟಣದ ಶ್ರೀ ಅಮೃತೇಶ್ವರ ಜಾತ್ರಾಮಹೋತ್ಸವದ ಕಲ್ಯಾಣೋತ್ಸವು ಶುಕ್ರವಾರ ರಾತ್ರಿ ಸಡಗರ ಸಂಭ್ರಮದಿಂದ ಜರುಗಿತು. ರಥೋತ್ಸವದ ಮುನ್ನಾ ದಿನ ಅಂದರೆ ಶುಕ್ರವಾರ ರಾತ್ರಿ ಶ್ರೀ ಪಾರ್ವತಿ ಸಮೇತ ಶ್ರೀ ಅಮೃತೇಶ್ವರನ ಕಲ್ಯಾಣೋತ್ಸವ ಹಾಗೂ ಅನ್ನಸಂತರ್ಪಣೆ ಸಾವಿರಾರು ಭಕ್ತರ ಮಧ್ಯಭಾಗದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಕಲ್ಯಾಣೋತ್ಸವಕ್ಕೆ ಬಂದ ಭಕ್ತರಿಗೆ ಬುಂದೆ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರು ಪ್ರಸಾದದ ವ್ಯವಸ್ಥೆಯನ್ನು ಸದ್ಭಕ್ತ ಮಂಡಳಿ ಆಯೋಜನೆ ಮಾಡಿರುವದು ಎಲ್ಲರ ಗಮನ ಸೆಳೆದಿತ್ತು. ದೇವಸ್ಥಾನಕ್ಕೆ ವಿದ್ಯುದ್ವೀಪಾಲಂಕರ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.

Edited By : Nagesh Gaonkar
Kshetra Samachara

Kshetra Samachara

17/12/2021 10:08 pm

Cinque Terre

49.41 K

Cinque Terre

1

ಸಂಬಂಧಿತ ಸುದ್ದಿ