ಹುಬ್ಬಳ್ಳಿ: ಕಾರ್ತಿಕ ಮಾಸದ ಅಂಗವಾಗಿ ಶ್ರೀ ಕ್ಷೇತ್ರ ಬಸವಣ್ಣ ದೇವರ ಸಮಿತಿಯ ವತಿಯಿಂದ, ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಮ. ನಿ. ಪ. ಬಸವಲಿಂಗ ಮಹಾಸ್ವಾಮಿಗಳು ದೀಪ ಹಚ್ಚುವ ಮೂಲಕ ಕಾತಿ೯ಕೋತ್ಸವಕ್ಕೆ ಚಾಲನೆ ನೀಡಿದರು.
ಚಾಲನೆ ನೀಡಿ ಜೀವನದಲ್ಲಿ ಕತ್ತಲೆ ಯನ್ನು ಕಳೆದು ಬೆಳಕನ್ನು ತಂದು ಕೋಡುವುದೆ ಈ ದೀಪ, ದೀಪ ಹಚ್ಚುವ ಮುಖಾಂತರ ನಾಡಿಗೆ ಕಂಠಕವಾಗಿ ಬಂದ ಕೋವಿಡ ಈ ಮಹಮಾರಿ ಕೊರೋನಾವನ್ನು, ದೀಪದ ಶ್ಯಾಕದಿಂದ ನಸೀಸಿ ಹೋಗಲಿ, ನಾಡಿನ ಜನತೆ ಮೊದಲಿನ ಹಾಗೆ ಸುಖ ಶಾಂತಿ ನೆಮ್ಮದಿಯಿಂದ ಇರಲಿ ಅಂತ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಈರಪ್ಪ ಕ ಎಮ್ಮಿ, ಸದಸ್ಯರಾದ ದೇಸಾಯಿಗೌಡ ಉಳ್ಳಿಗೇರಿ ರೇವಣಸಿದ್ದಪ್ಪ ರಾಯನಾಳ, ಬಸವಂತಪ್ಪ ಮಾದರ, ಸುರೇಶ ಕ್ಯಾತರಿ, ಸಿದ್ದು ಹಿರೇಮಠ, ಚನ್ನಬಸಯ್ಯ ಹಿರೇಮಠ, ರಾಜು ಮೇಟಿ, ಸಿದ್ದು ಹುಲಗುರ ಚಂದ್ರು ಮೇಟಿ, ಶ್ರೀಧರ ಹಿರೇಮಠ ಭಕ್ತರು ಉಪಸ್ಥಿತರಿದ್ದರು.
Kshetra Samachara
09/12/2021 01:06 pm