ಹುಬ್ಬಳ್ಳಿ: ದಸರಾ ಆಯುಧ ಪೂಜೆಗೆ ಎಲ್ಲೆಡೆ ಸಡಗರ ಸಂಭ್ರಮ ಈ ಹಿನ್ನೆಲೆಯಲ್ಲಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ವ್ಯಾಪಾರ ವಹಿವಾಟು ಬಲು ಜೋರಾಗಿರುವ ದೃಶ್ಯಗಳು ಸಾಮಾನ್ಯವಾಗಿದ್ದು,ಇನ್ನೂ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿತ್ತು.
ಕಳೆದ ಎರಡು ವರ್ಷಗಳಿಂದ ಧಾರ್ಮಿಕ ಆಚರಣೆಗಳು ಸಾಕಷ್ಟು ಕಳೆಗುಂದಿದ್ದವು. ಆದರೆ ಈ ಬಾರಿಯ ದಸರಾ ಆಯುಧ ಪೂಜೆ ಬಲು ಜೋರಾಗಿ ನಡೆಯುತ್ತಿದೆ. ಹುಬ್ಬಳ್ಳಿಯ ಈದ್ಗಾ ಮೈದಾನ, ಜನತಾ ಬಜಾರ ಮಾರುಕಟ್ಟೆಯಲ್ಲಿ ಹಬ್ಬದ ಸಡಗರ ಜೋರಾಗಿದೆ. ಹೂವು, ಹಣ್ಣು, ಎಲೆ, ಕಾಯಿ ಸೇರಿದಂತೆ ಎಲ್ಲ ತರಹದ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಲು ಜನ ಮುಂದಾಗಿದ್ದಾರೆ.
Kshetra Samachara
14/10/2021 04:25 pm