ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನವರಾತ್ರಿ ಉತ್ಸವ ಗ್ರಾಮೀಣ ಭಾಗದಲ್ಲಿ ಪುರಾಣ ಪ್ರವಚನ

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಗ್ರಾಮದ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ ಉದ್ಘಾಟಿಸಿದರೆ, ಪ್ರವಚನಕಾರ ಕಾಳಪ್ಪ ಕಂಬಾರ ಪುರಾಣ ಆರಂಭಿಸಿದ್ದಾರೆ. ಅವರಿಗೆ ವೀರೇಶ್ ಶಾಸ್ತ್ರಿಗಳು ನಂದಿಕೇಶ್ವರ ತಬಲ ವಿಜಯಕುಮಾರ ಮರಲಿಂಗ ಹಾರ್ಮೋನಿಯಂ ಸಾಥ್ ನೀಡಿದ್ದಾರೆ. ಈಗಾಗಲೇ ದೇವಸ್ಥಾನವನ್ನು ದೀಪಾಲಂಕಾರದಿಂದ ಶೃಂಗಾರ ಮಾಡಲಾಗಿದ್ದು, ಗ್ರಾಮದ ಹಿರಿಯರು ನಾಗರೀಕರು ಮಹಿಳೆಯರು ಪ್ರವಚನ ಕೇಳಲು ಆಗಮಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

09/10/2021 04:06 pm

Cinque Terre

11.14 K

Cinque Terre

0

ಸಂಬಂಧಿತ ಸುದ್ದಿ