ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶೇಷ ಅಲಂಕಾರಗೊಂಡ ಗಾಳಿ ದುರ್ಗಮ್ಮ ದೇವಿ

ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಹುಬ್ಬಳ್ಳಿಯ ಗಬ್ಬೂರ ಬಳಿ ಇರುವ, ಐತಿಹಾಸಿಕ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚುರುಕುಗೊಂಡಿವೆ.

ಹೌದು, ದೇವಸ್ಥಾನದಲ್ಲಿ ದೇವಿಗೆ ಚಿನ್ನಾಭರಣ, ಹೂವುಗಳಿಂದ ವಿಶೇಷ ಅಲಂಕಾರ ಮಾಡಿ. ಗುರುವಾರ ಸಂಜೆ ಘಟ ಸ್ಥಾಪಿಸಿದ್ದಾರೆ. ದೇವಸ್ಥಾನದಲ್ಲಿ ಪ್ರತಿದಿನ ಭಜನೆ, ದೇವಿ ಪುರಾಣ, ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತವೆ.

ಇನ್ನು ಇತಿಹಾಸ ಹೊಂದಿರುವ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಒಬ್ಬತ್ತು ದೇವತೆಗಳನ್ನು ಕುಡಿಸಿ, ಸಂಭ್ರಮ ಸಡಗರದಿಂದ ನವರಾತ್ರಿ ಉತ್ಸವ ಆಚರಿಸಲಾಗುತ್ತಿದ್ದು, ಪ್ರತಿನಿತ್ಯ ದೇವಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ, ವಿಧಿವಿಧಾನಗಳು ನಡೆಯುತ್ತವೆ. ಇಲ್ಲಿಗೆ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ ಎಂದು ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿರುಪಾಕ್ಷಪ್ಪ ಹರ್ಲಾಪುರ ಹಾಗೂ ಪ್ರಧಾನ ಅರ್ಚಕ ಸಿದ್ದಯ್ಯ ಶಾಸ್ತ್ರಿಗಳು ಹಾಗೂ ಶರಣಯ್ಯ ಶಾಸ್ತ್ರಿ ಹೇಳಿದರು.

Edited By : Manjunath H D
Kshetra Samachara

Kshetra Samachara

08/10/2021 11:51 am

Cinque Terre

61.84 K

Cinque Terre

11

ಸಂಬಂಧಿತ ಸುದ್ದಿ