ನವಲಗುಂದ : ಗಣೇಶೋತ್ಸವ ಬಂದ್ರೆ ಸಾಕು ಜನರಲ್ಲಿ ಎಲ್ಲಿಲ್ಲದ ಸಂತಸ ಸಡಗರ ಮನೆ ಮಾಡಿ ಬಿಡುತ್ತೆ, ಅದಕ್ಕೆ ಪೂರಕ ಎಂಬಂತೆ ನಾಳೆಯ ಗಣೇಶ ಚತುರ್ಥಿಗೆ ನವಲಗುಂದ ಪಟ್ಟಣದ ಜನರು ಇಂದು ಬೆಳಿಗ್ಗೆಯಿಂದಲೇ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಹೌದು ಜನರು ಹಬ್ಬದ ಸಡಗರದಲ್ಲಿ ಮಿಂದೆದ್ದ ದೃಶ್ಯಗಳು ಗುರುವಾರ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಕಂಡು ಬಂದವು. ನಾಳೆಯ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಸೇರಿದಂತೆ ಅಲಂಕಾರಿತ ವಸ್ತುಗಳನ್ನು ಕೊಳ್ಳುವಲ್ಲಿ ಜನರು ಬ್ಯುಸಿ ಆಗಿದ್ದರು.
Kshetra Samachara
09/09/2021 07:55 pm