ಹುಬ್ಬಳ್ಳಿ: ದೀಪಾವಳಿ ಹಬ್ಬದಲ್ಲಿ ದೀಪ ಬೆಳಗುವಂತೆ ಕಾರ್ತೀಕ ಮಾಸದಲ್ಲಿ ಕಾರ್ತೀಕ ದೀಪ ಬೆಳಗುವ ಮೂಲಕ ಆಚರಣೆ ಮಾಡುವುದು ನಮ್ಮ ಭಾರತೀಯ ಸಂಪ್ರದಾಯ.ಈ ಕಾರ್ತೀಕ ಮಾಸದಲ್ಲಿ ದೇವಾಲಯಗಳಲ್ಲಿ ಕಾರ್ತೀಕ ಹಬ್ಬವನ್ನು ಆಚರಣೆಯನ್ನು ನೋಡುವುದೇ ಒಂದು ಸಡಗರ. ಇಂತಹ ವೈವಿಧ್ಯಮಯ ಸಡಗರಕ್ಕೆ ಸಾಕ್ಷಿಯಾಗಿದೆ ನಮ್ಮ ಹುಬ್ಬಳ್ಳಿ. ಹಾಗಿದ್ದರೇ ಬನ್ನಿ ನಮ್ಮ ಹುಬ್ಬಳ್ಳಿಯ ಸಂಭ್ರಮವನ್ನು ನೋಡಿಕೊಂಡು ಬರೋಣ...
ದೇವಾಲಯದ ಆವರಣದಲ್ಲಿ ದೀಪಗಳ ಸರ ಮಾಲೆಯಲ್ಲಿ ಕಂಗೊಳಿಸುವ ಕಾರ್ತೀಕ ದೀಪೋತ್ಸವಕ್ಕೆ ಸಾಕ್ಷಿಯಾಯಿತು. ಹುಬ್ಬಳ್ಳಿಯ ಉಣಕಲನ ಸಿದ್ಧಪ್ಪಜ್ಜನ ದೇವಸ್ಥಾನದಲ್ಲಿ ಭಜನೆ,ಕೀರ್ತನ ಜೊತೆಗೆ ವಿಶೇಷ ಪೂಜೆಯನ್ನು ನೆರವೇರಿಸುವ ಮೂಲಕ ಕಾರ್ತೀಕ ಹಬ್ಬದ ಕಳೆ ಮೊಳಕೆ ಒಡೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ದೀಪ ಬೆಳಗುವ ಮೂಲಕ ಎಲ್ಲರ ಮನೆ ಮನ ಬೆಳಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಪ್ರತಿಯೊಂದು ದೇವಸ್ಥಾನದಲ್ಲಿ ಕಾರ್ತೀಕ ದೀಪ ಬೆಳಗುವುದು ವಾಡಿಕೆ.ವಾಣಿಜ್ಯನಗರಿಯಲ್ಲಂತೂ ಇಂತಹ ಸಂಭ್ರಮ ಮುಗಿಲು ಮುಟ್ಟುವುದಂತೂ ಖಂಡಿತ.
Kshetra Samachara
10/12/2020 03:54 pm