ತಾಲೂಕಿನಲ್ಲಾದ ಮಳೆಹಾನಿ ಪ್ರದೇಶಕ್ಕೆ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಭೇಟಿ ನೀಡಿದ್ದು, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಣೆ ಮಾಡಿದ್ದಾರೆ.
ಹೌದು ! ಮಂಟೂರ ಗ್ರಾಮದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಂಡಿದ್ದು, ಈ ನಿಟ್ಟಿನಲ್ಲಿ ಮಾಜಿ ಶಾಸಕ ಗ್ರಾಮಸ್ಥರಿಗೆ ಉಪಹಾರದ ವ್ಯವಸ್ಥೆ ಸಹ ಮಾಡಿದ್ದಾರೆ.
ಇನ್ನೂ ಮಾಜಿ ಶಾಸಕರ ಮುಂದೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಬೆಳೆ ಪರಿಹಾರ ಒಂದು ರೂಪಾಯಿ ಬಂದಿಲ್ಲಾ. ಬೇಕಾದವರಿಗೆ ಹಣ ಹಾಕ್ತಾರೆ, ನಮಗೆ ಒಂದು ರೂಪಾಯಿ ಬಂದಿಲ್ಲಾ. ಬಡವರು ಏನು ಮಾಡಬೇಕೆಂದು ಅಳಲು ತೊಡಿಕೊಂಡ ಮಹಿಳೆಯರು, ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/10/2022 12:25 pm