ವಾಯುವಿಹಾರಕ್ಕೆಂದು ಹೋಗಿದ್ದ ಕುಸ್ತಿಪಟು ಒಬ್ಬರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಸಂಗಪ್ಪ ಬಳಿಗೇರ ಎಂಬುವವರೇ ಸಾವನ್ನಪ್ಪಿದ ಕುಸ್ತಿಪಟು.
ಸಂಗಪ್ಪ ಅವರು ಧಾರವಾಡದಲ್ಲೇ ನೆಲೆಸಿದ್ದರು. ಇಂದು ಬೆಳಿಗ್ಗೆ ವಾಯುವಿಹಾರಕ್ಕೆಂದು ತಮ್ಮ ಸ್ನೇಹಿತನೊಂದಿಗೆ ತೆರಳಿದ್ದರು. ಈ ವೇಳೆ ಅವರಿಗೆ ಏಕಾಏಕಿ ಹೃದಯಾಘಾವಾಗಿ ಕೆಳಗಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಧಾರವಾಡದ ಮದಿಹಾಳದ ಬಳಿ ಈ ಘಟನೆ ಸಂಭವಿಸಿದೆ. ಶಾಲಾ ಕಟ್ಟಡದ ಮೇಲೆ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಸಂಗಪ್ಪ ಕುಸಿದು ಬಿದ್ದ ತಕ್ಷಣ ಆತನ ಸ್ನೇಹಿತ ಹಾಗೂ ಇತರರು ಸಂಗಪ್ಪನನ್ನು ಮೇಲೆಬ್ಬಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕುಸ್ತಿಪಟು ಸಂಗಪ್ಪ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 03:07 pm