● 'ಝಿರೋ ಟ್ರಾಫಿಕ್' ರದ್ದು ಪಡಿಸುವ ಮಹತ್ವದ ತೀರ್ಮಾನಕ್ಕೆ ನಾಡದೊರೆಯ ಅಸ್ತು!ಹಲವು ಬಾರಿ ತಮಗೆ ನೀಡುತ್ತಿದ್ದ 'ಗೌರವ ರಕ್ಷೆ'ಗೂ ಕಡಿವಾಣ!!ಸರಕಾರಿ ಸಭೆ-ಸಮಾರಂಭಗಳಲ್ಲಿ ಕನ್ನಡ ಪುಸ್ತಕಗಳ ಉಡುಗೊರೆ!!!
● ಐತಿಹಾಸಿಕ ನಿರ್ಧಾರಗಳಿಂದ ಆಡಳಿತ ಯಂತ್ರದಲ್ಲಿ ಭಾರೀ ಬದಲಾವಣೆ ತರಲೆತ್ನಿಸುತ್ತಿರುವ ನಮ್ಮಯ ಹೆಮ್ಮೆಯ ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
● ಬೆಂಗಳೂರು ಬಿಡಿ..., ಹುಬ್ಬಳ್ಳಿಯಲ್ಲೂ ಮಂತ್ರಿ-ಮಹೋದಯರ ಭೇಟಿಯ ವೇಳೆ(ಅವರು ಎಷ್ಟೇ ತಡವಾಗಿ ಬರಲಿ) 4/5 ತಾಸು ರಸ್ತೆಗಳೆಲ್ಲ ಪೋಲಿಸರ ಸುಪರ್ದಿಯಲ್ಲಿರುವುದರಿಂದ ಸಾರ್ವಜನಿಕರ, ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವವರ ಹಾಗೂ ಅಗ್ನಿ ಶಾಮಕ ದಳದ ವಾಹನಗಳ ಸ್ಥಿತಿ ನಿಜಕ್ಕೂ ದೇವರಿಗೇ ಪ್ರೀತಿ!! ಆಗಲೂ ಸೂಕ್ತ ಬದಲಾವಣೆ ತರಬೇಕೆಂಬುದು ಒತ್ತಾಸೆ.
● ಮಾನ್ಯ ಮುಖ್ಯ ಮಂತ್ರಿಗಳ ಈ ಮಾದರೀಯ ನೀತಿಯನ್ನು ಸಂಪುಟದ ಇತರ ಸಚಿವರೂ ಅನುಸರಿಸಿ ಮೇಲ್ಪಂಕ್ತಿ ಹಾಕುವರೆಂದು ಆಶಿಸೋಣವೇ!?!
● ನಾರಾಯಣ ವೆಂ.ಭಾದ್ರಿ.
ನವನಗರ,ಹುಬ್ಬಳ್ಳಿ.
Kshetra Samachara
19/08/2021 09:00 am