ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೆಡಿಯೇಟರ್ ಬ್ಲಾಸ್ಟ್ ಆರು ವಿದ್ಯಾರ್ಥಿಗಳಿಗೆ ಗಾಯ; ಮನೆಗೆ ಹೊರಟಿದ್ದ ಮಕ್ಕಳು ಆಸ್ಪತ್ರೆಗೆ ದಾಖಲು

ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಟಾಟಾ ಮ್ಯಾಜಿಕ್ ವಾಹನದ ರೆಡಿಯೇಟರ್ ಬ್ಲಾಸ್ಟ್ ಆದ ಪರಿಣಾಮ ವಾಹನದಲ್ಲಿದ್ದ ಆರಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಗೋಕುಲ ರಸ್ತೆಯಲ್ಲಿ ನಡೆದಿದೆ.

ಚಾಲಕನ ನಿರ್ಲಕ್ಷ್ಯದಿಂದ ರೆಡಿಯೇಟರ್ ಬ್ಲಾಸ್ಟ್ ಆಗಿದ್ದು, ಚೇತನ ಪಬ್ಲಿಕ್ ಸ್ಕೂಲ್ ಮಕ್ಕಳಿಗೆ ಗಾಯಗಳಾಗಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಶಾಲೆಯಿಂದ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ರೆಡಿಯೇಟರ್ ನಲ್ಲಿ ನೀರು ಕುದಿಯುವ ಬಗ್ಗೆ ಮಕ್ಕಳು ಚಾಲಕನ ಗಮನಕ್ಕೆ ತಂದರೂ ಕೂಡ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇನ್ನೂ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ವಾಹನಗಳ ಬೇಜವಾಬ್ದಾರಿತನದಿಂದ ಇಂತಹದೊಂದು ಅವಘಡ ಸಂಭವಿಸಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/08/2022 06:25 pm

Cinque Terre

119.59 K

Cinque Terre

7

ಸಂಬಂಧಿತ ಸುದ್ದಿ