ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ KSRTC ಸಿಬ್ಬಂದಿ

ಹುಬ್ಬಳ್ಳಿ: ವಾಯುವ್ಯ ಸಾರಿಗೆ ಇಲಾಖೆಯನ್ನು ಖಾಸಗಿಕರಣ ಮಾಡಲು ಹೋರಟಿರುವ ರಾಜ್ಯ ಸರ್ಕಾರದ ವಿರುದ್ದ, KSRTC ಸ್ಪಾಫ್ ಆ್ಯಂಡ್ ಯುನಿಯನ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ತಹಶೀಲ್ದಾರ ಕಚೇರಿ ಮುಂದೆ ನಿಂತು ಪ್ರತಿಭಟನೆ ಮಾಡಿದ ಅವರು, ಕೆಎಸ್ಆರ್ಟಿಸಿಯನ್ನು ಖಾಸಗಿಕರಣ ಮಾಡದಂತೆ ಮನವಿ ನೀಡಲಾಯಿತು. ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ಸಂಚರಿಸುವ ಬೇಂದ್ರೆ ಸಾರಿಗೆ ಬಸ್ ಗಳ ಓಡಾಡ ಅವಧಿ ಮುಗಿದಿದ್ದರು ಕೂಡ ಸಂಚಾರ ಮುಂದುವರೆಸಿವಂತೆ ಆದೇಶ ಮಾಡಿದೆ. ಜೊತಗೆ ಹುಬ್ಬಳ್ಳಿ ಹಾಗೂ ಬಿಜಾಪುರ ನಡುವೆ ಖಾಸಗಿ ಸಂಸ್ಥೆ ಗೆ ಬಸ್ ಸಂಚಾರ ಒದಗಿಸಲು ಅನುಮತಿ ನೀಡುತ್ತಿದೆ.

ಈಗಾಗಲೇ ಖಾಸಗಿ ಬಸ್ ಸಂಚಾರದಿಂದ ವಾಯುವ್ಯ ಸಾರಿಗೆಗೆ ಪ್ರತಿ ದಿನ ೧೦ ಲಕ್ಷ ರೂಪಾಯಿ ನಷ್ಟ ಅನುಭವಿಸುತ್ತಿದೆ. ಇದಿರಿಂದದ ಖಾಸಗಿ ಬಸ್ ಗಳ ಓಡಾಟ ಕ್ಕೆ ಧಾರವಾಡ ಜಿಲ್ಲಾಡಳಿತ ಬ್ರೇಕ್ ಹಾಕಿದರು ಕೂಡ, ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ ಎಂದು ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Edited By : Shivu K
Kshetra Samachara

Kshetra Samachara

01/10/2022 03:04 pm

Cinque Terre

23.6 K

Cinque Terre

0

ಸಂಬಂಧಿತ ಸುದ್ದಿ